ಬೆಂಗಳೂರು : ಈಗಾಗಲೇ ಕರ್ನಾಟಕ ರಾಜ್ಯ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪತ್ರಿಕೆಗಾಗಿ ಅರ್ಜಿ ಸಲ್ಲಿಸಲು ಮುಂದಾದ ವಿದ್ಯಾರ್ಥಿಗಳಿಗೆ ಇದೀಗ ಗೊಂದಲ ಶುರುವಾಗಿದೆ.
ಹೌದು, ಶಾಲಾ ಪರೀಕ್ಷಾ ಮಂಡಳಿ ಮಹಾ ಎಡವಟ್ಟು ಮಾಡಿದ್ದು, ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆ ಸ್ಕ್ಯಾನ್ ಮಾಡದೇ ಮೊಬೈಲ್ ಪೋಟೋ ಅಪ್ ಲೋಡ್ ಮಾಡಿದ್ದು, ಸರಿಯಾಗಿ ಉತ್ತರ ಪತ್ರಿಕೆ ಕಾಣದೇ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಉತ್ತರ ಪತ್ರಿಕೆಗಾಗಿ ಗೌರಿಶ್ ದಿಲೀಪ್ ಬಾಬಾಜಿ ಎಂಬುವರು ಅರ್ಜಿ ಸಲ್ಲಿಸುತ್ತಾರೆ. ಈ ವೇಳೆ ಶಾಲಾ ಪರೀಕ್ಷಾ ಮಂಡಳಿ ಮಹಾ ಎಡವಟ್ಟು ಬಯಲಾಗಿದೆ.
ನಾಳೆ ಮರು ಏಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ. ಇಂತಹ ಉತ್ತರ ಪ್ರತಿ ಅಪ್ ಲೋಡ್ ಮಾಡಿದರೆ ವಿದ್ಯಾರ್ಥಿಗಳಿಗೆ ಹೇಗೆ ಕಾಣಿಸುತ್ತದೆ.? ಜೊತೆಗೆ ಬ್ಲರ್, ಉತ್ತರ ಪತ್ರಿಕೆ ಪೋಟೋ ತೆಗೆದವರ ಕೈ ಬೇರೆ ಇಟ್ಟು ಪೋಟೋ ತೆಗೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಏನು ಬರೆದಿದ್ದೇವೆ ಎಂಬುದೇ ಕಾಣೋದು ಕಷ್ಟ ಆಗಿದೆ. ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬ ಗೊಂದಲವನ್ನು ಶಾಲಾ ಪರೀಕ್ಷಾ ಮಂಡಳಿ ಉದ್ಭವಿಸುವಂತೆ ಮಾಡಿದೆ. ಇದಕ್ಕೆ ಹೊಣೆ ಯಾರು.? ಯಾಕೆ ಇಷ್ಟು ಎಡವಟ್ಟು.? ಇಂತಹ ಉತ್ತರ ಪತ್ರಿಕೆ ಪಡೆಯಲು ಸಾವಿರಾರು ಶುಲ್ಕ ಪಾವತಿಸಬೇಕ ಅಂತ ವಿದ್ಯಾರ್ಥಿಗಳು, ಪೋಷಕರು ಕಿಡಿಕಾಡಿದ್ದಾರೆ.
ಶಾಲಾ ಪರೀಕ್ಷಾ ಮಂಡಳಿ ಉತ್ತರ ನೀಡುತ್ತಾ.? ವಿದ್ಯಾರ್ಥಿಗಳಿಗೆ ಆದಂತಹ ಈ ಸಮಸ್ಯೆ ಕಾರಣ ಮರು ಮೌಲ್ಯಮಾಪನಕ್ಕೆ ಮತ್ತಷ್ಟು ಕಾಲಾವಕಾಶ ನೀಡುತ್ತಾ.? ಈ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬಹುದಾಗಿದೆ.