ಬೆಂಗಳೂರು:ಕರ್ನಾಟಕದ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2001 ಪರಿಣಾಮಕಾರಿ ಅನುಷ್ಠಾನಕ್ಕೆ ಸಕಾಲ ಮಿಷನ್ ನ್ನು ರಚಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.
ಸಕಾಲ ಸೇವೆಗಳ ಅಧಿನಿಯಮ 2001, ತಿದ್ದುಪಡಿ ಅಧಿನಿಯಮ 2014 ರಲ್ಲಿನ ಎಲ್ಲಾ ಸಕಾಲ ಅಧಿಸೂಚಿತ ಸಕಾಲ ಸೇವೆಗಳನ್ನು ಕಾಲ ಮಿತಿಯಲ್ಲಿ ನೀಡುವುದು ಕಡ್ಡಾಯವಾಗಿರುತ್ತದೆ.ಹಾಗೂ 15 ಅಂಕಿಯ ಸಕಾಲ ಸ್ವೀಕೃತಿ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿರುತ್ತದೆ.
ಸೇವೆಗಳ ಅರ್ಜಿಗಳಿಗೆ ಸಂಬಂಧಿಸಿದಂತೆ ನೀಡುವ ಪ್ರಮಾಣ ಪತ್ರಗಳು,ಮಂಜೂರಾತಿ ಪತ್ರಗಳಿಗೆ GSC ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.ಇಲ್ಲದಿದ್ದರೆ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.