ಬೆಂಗಳೂರು : ರಾಜ್ಯ ಸರ್ಕಾರವು ಮಹತ್ವದ ಕರ್ನಾಟಕ ಗ್ರಾಮ ಸ್ವರಾಜ್-ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದ್ದು, ಈ ಮೂಲಕ ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆ ಅಡಿ ತರಲಿದೆ.
ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯ ಆಸ್ತಿಗಳು ನಕ್ಷೆ ಮಂಜೂರಾತಿ ಪಡೆಯದೇ ಕಂದಾಯ ನಿವೇಶನ ಹಾಗೂ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಇ-ಖಾತಾ ಅಡಿ ತರಲಾಗಿದೆ. ಅದೇ ಮಾದರಿಯಲ್ಲಿ ಇದೀಗ ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿ ಯಲ್ಲಿನ ಆಸ್ತಿಗಳನ್ನು ಇ-ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ತರುವುದಕ್ಕಾಗಿ ವಿಧೇಯಕದಲ್ಲಿ 199ಬಿ ಮತ್ತು 199ಸಿಗೆ ತಿದ್ದುಪಡಿ ತರಲಾಗಿದೆ.
ಸರ್ಕಾರಿ, ಅರಣ್ಯ ಭೂಮಿ, ಸರ್ಕಾರಿ ಒಡೆತನದ ಅಥವಾ ನಿಯಂತ್ರಣ, ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಹೊರತುಪಡಿಸಿದ ಆಸ್ತಿಗಳಿಗೆ ತಾತ್ಕಾಲಿಕ ಖಾತಾ ನೀಡಲಾಗುವುದು. ಗ್ರಾಮ ಪಂಚಾಯಿತಿ ಮಾದರಿ ಕಟ್ಟಡ ಉಪನಿಧಿಗಳ ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ ಅಥವಾ ಪರಿವರ್ತನೆಯಾಗದ ಭೂಮಿ ಇಲ್ಲವೇ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿ ಮೇಲಿನ ಅನುಮೋದಿತವಲ್ಲದ ಬಡಾವಣೆ ಅಥವಾ ನಿವೇಶನ ಕಟ್ಟಡ ಸೇರಿ ಪ್ರತಿಯೊಂದು ಕಟ್ಟಡ, ಖಾಲಿ ನಿವೇಶನಗಳಿಗೆ ಬಿ ನಮೂನೆಯ ಇ- ಖಾತಾ ಅನ್ವಯವಾಗಲಿದೆ.
ತಿದ್ದುಪಡಿ ತಂದು ಅನಧಿಕೃತ ಕಟ್ಟಡ ಮತ್ತು ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆ ಯಾದ ಭೂಮಿಗಳಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆ ಸ್ವತ್ತುಗಳು ಮೊದಲ ವರ್ಷದ ತೆರಿಗೆ ಎರಡು ಪಟ್ಟು ಪಾವತಿಸಬೇಕಿದೆ. ನಂತರ ವಾರ್ಷಿಕ ತೆರಿ ಗೆಯನ್ನು ಪಾವತಿಸುವಂತೆ ಸೂಚಿಸಲಾಗುತ್ತಿದೆ. ಹಾಗೆಯೇ, ಅಧಿಸೂಚನೆ ಪ್ರಕಟಗೊಂಡ 2 ವರ್ಷಗಳಲ್ಲಿ ಅನಧಿಕೃತ ಆಸ್ತಿಗಳನ್ನು ತೆರಿಗೆ ಪಾವತಿ ವ್ಯವಸ್ಥೆಯೊಳಗೆ ತರುವಂತಾಗಬೇಕು ಎಂದೂ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.