ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆಸ್ತಿ ನೋಂದಣಿ ರದ್ದುಪಡಿಸಲು ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಸಚಿವರು, ನಿಯಮಬಾಹಿರ, ಅಕ್ರಮ ನೋಂದಣಿ ಪ್ರಕರಣಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಿರುವ ಕರ್ನಾಟ ನೋಂದಣಿ ತಿದ್ದುಪಡಿ ಕಾಯ್ದೆ – 2023ಕ್ಕೆ ಸೆಪ್ಟೆಂಬರ್ ಒಳಗೆ ಕರಡು ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸ ರಿನಲ್ಲಿ ಆಸ್ತಿ ನೋಂದಣಿ ಮಾಡಿ ವಂಚಿಸಿರುವುದು ಸಾಬೀತಾದಲ್ಲಿ ಅಂತಹ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಕರಡು ನಿಯಮವನ್ನು ಈ ತಿಂಗಳಲ್ಲಿ ಪ್ರಕಟಿಸಲಾಗುವುದು ಹೇಳಿದ್ದಾರೆ.
ನಕಲಿ ದಾಖಲೆ, ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಂಡ ಮೇಲೆ ವಂಚನೆಗೆ ಒಳಗಾದವರು ಕೋರ್ಟ್ಗೆ ಹೋಗಬೇಕಾಗುತ್ತದೆ. ಕೋರ್ಟ್ಗೆ ಹೋದರೆ ಪ್ರಕರಣ ಇತ್ಯರ್ಥವಾಗಲು ವರ್ಷಗಟ್ಟಲೆ ಬೇಕಾಗುತ್ತದೆ, ಹೀಗಾಗಿ ಇಂತಹ ವಂಚನೆ ಗಳ ಪ್ರಕರಣಗಳು ಸಾಬೀತಾದಲ್ಲಿ ಅಂತಹ ನೋಂದಣಿ ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದರು.
ನಿಯಮಬಾಹಿರ, ಅಕ್ರಮ ನೋಂದಣಿ ಪ್ರಕರಣಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಿರುವ ಕರ್ನಾಟ ನೋಂದಣಿ ತಿದ್ದುಪಡಿ ಕಾಯ್ದೆ – 2023ಕ್ಕೆ ಸೆಪ್ಟೆಂಬರ್ ಒಳಗೆ ಕರಡು ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.… pic.twitter.com/alb7y0tyYg
— DIPR Karnataka (@KarnatakaVarthe) August 14, 2025