ಕಲಬುರಗಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆರ್ ಎಸ್ ಎಸ್ ಗೀತೆ ಪಠಣ ಮಾಡಿರುವ ಆರೋಪ ಕೇಳಿಬಂದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆರ್ ಎಸ್ ಎಸ್ ಗೀತೆ ಪಠಿಸಲಾಗಿದೆ. ಕೇಂದ್ರೀಯ ವಿವಿ ಆವರಣದ ಅತಿಥಿ ಗೃಹದಲ್ಲಿ ಸಭೆ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಈ ಸಭೆಯಲ್ಲಿ ಆರ್ ಎಸ್ ಎಸ್ ಗೀತೆ ಹೇಳಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಆರ್ ಎಸ್ ಎಸ್ ಸಭೆಗೆ ಬೇರೆ ರಾಜ್ಯಗಳಿಂದ ಐದಾರು ಆರ್ ಎಸ್ ಎಸ್ ಮುಖಂಡರು ಆಗಮಿಸಿದ್ದರು, ಈ ಸಭೆಯಲ್ಲಿ ವಿವಿ ಕುಲಪತಿ, ಪ್ರಾಧ್ಯಾಪಕರು ಭಾಗಿಯಾಗಿದ್ದರು ಎನ್ನುವ ಅಋೋಪ ಕೇಳಿ ಬಂದಿದೆ. 2025 ರ ಅಂತ್ಯಕ್ಕೆ ಆರ್ ಎಸ್ ಎಸ್ ಗೆ 100 ವರ್ಷ ತುಂಬು ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ.