ಬೆಂಗಳೂರು: ರಾಜ್ಯ ಸರ್ಕಾರದಿಂದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಬಾಕಿ ಹಾಗೂ ಇಂಧನ ಬಾಕಿ ಹೊಣೆಗಾರಿಕೆಯನ್ನು ಪಾವತಿಸಲು ಸರ್ಕಾರದ ಖಾತರಿ, ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ 2000 ಕೋಟಿ ಸಾಲವನ್ನು ಪಡೆಯಲು ಅನುಮೋದನೆ ನೀಡಿದೆ.
ಇಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳ ಕ್ರೋಢೀಕೃತ ಪತ್ರದಲ್ಲಿ ಹಾಗೂ ಮೇಲೆ ಓದಲಾದ ಕ್ರಮ ಸಂಖ್ಯೆ (2)ರಿಂದ (4)ರ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇವರು ನಾಲ್ಕು ಸಾರಿಗೆ ನಿಗಮಗಳು ರಾಜ್ಯದ ಜನತೆಗೆ ಉತ್ತಮ ಗುಣಮಟ್ಟದ, ವ್ಯವಸ್ಥಿತ, ಸುರಕ್ಷಿತ ಹಾಗೂ ಮಿತವ್ಯಯದಲ್ಲಿ ಸಾರಿಗೆ ಸೇವೆಯನ್ನು ನೀಡುವಲ್ಲಿ ಸತತ ಪರಿಶ್ರಮವನ್ನು ವಹಿಸುತ್ತಿದ್ದು, ಸಂಸ್ಥೆಗಳ ಕಾರ್ಯಚರಣೆಯ ಸಮರ್ಪಕ ನಿರ್ವಹಣೆ ಹಾಗೂ ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದ್ದರೂ ಸಹ, ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿರುತ್ತದೆ ಹಾಗೂ ನಗದು ಹರಿವಿನಲ್ಲಿ ಕೊರತೆ ಉಂಟಾಗಿರುತ್ತದೆ.
ನವೆಂಬರ್-2024 ಮಾಹೆಯ ಅಂತ್ಯದಲ್ಲಿದಂತೆ, ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ/ ರಜೆ ನಗಧೀಕರಣ, ಸಿಬ್ಬಂದಿಗಳ ಬಾಕಿ (ತುಟ್ಟಿ ಭತ್ಯೆ, ರಜೆ ನಗಧೀಕರಣ), ಇಂಧನ, ಸರಬುರಾಜುದಾರರ ಬಾಕಿ, ಅಪಘಾತ ಪರಿಹಾರ ಪ್ರಕರಣಗಳು, ಇತರೆ ಹಾಗೂ ನಿವೃತ್ತರಿಗೆ ಪರಿಷ್ಕೃತ ಉಪಧನ, ರಜೆ ನಗಧೀಕರಣ ಬಾಕಿ ಹಾಗೂ ಸಾಲದ ಹೊಣೆಗಾರಿಕೆಗಳು ಸೇರಿದಂತೆ ಒಟ್ಟು ರೂ.6330.25 ಕೋಟೆಗಳ ಹೊಣೆಗಾರಿಕೆ ಬಾಕಿ ಕ್ರೋಡೀಕೃತವಾಗಿರುತ್ತದೆ.
ಈ ಕಾರಣಗಳಿಂದಾಗಿ ನಿಗಮಗಳ ಕಾರ್ಯಾಚರಣೆಗೆ ಅತ್ಯಗತ್ಯವಾದ ಸಿಬ್ಬಂದಿಗಳ ನಿವ್ವಳ ಜಿ.ಎಸ್.ಟಿ, ಪಿಂಚಣಿ, ಸಾಲ ವೇತನ, ಇಂಧನ ವೆಚ್ಚ, ಶಾಸನ ಬದ್ಧ ಪಾವತಿಗಳಾದ ಮರುಪಾವತಿ ಹಾಗೂ ಇತರೆ ಅತ್ಯಗತ್ಯ ವೆಚ್ಚಗಳನ್ನು ಮಾತ್ರ ಪಾವತಿ ಮಾಡಲಾಗುತ್ತಿದ್ದು, ಭವಿಷ್ಯ ನಿಧಿ ವಂತಿಕೆ, ನಿವೃತ್ತ ನೌಕರರ ಉಪಧನ ಹಾಗೂ ಇತರೆ ಬಾಬು ಮೊತ್ತವನ್ನು ನಗದು ಕೊರತೆಯಿಂದಾಗಿ ಸಾದ್ಯವಾಗದೇ, ಬಾಕಿ ಹೊಣೆಗಾರಿಕೆಯಾಗಿ ಉಳಿಸಿಕೊಳ್ಳಲಾಗುತ್ತಿದೆ.
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು, ಭವಿಷ್ಯ ನಿಧಿ ನ್ಯಾಸ ಮಂಡಳಿಯ 2022-23ನೇ ಸಾಲಿನ ಸಾರಿಗೆ ನಿಗಮಗಳು ನೌಕರರಿಂದ ಅನುಪಾಲನಾ ಲೆಕ್ಕಪರಿಶೋಧನೆ ಕೈಗೊಂಡಿದ್ದು, ಕಡಿತಗೊಳಿಸಲಾದ ಭವಿಷ್ಯ ನಿಧಿ ಮೊತ್ತವನ್ನು ಆಯಾ ತಿಂಗಳು ನ್ಯಾಸ ಮಂಡಳಿಗೆ ಜಮಾ ಮಾಡದೇ ಬಾಕಿ ಉಳಿಸಿಕೊಂಡಿರುವ ಬಗ್ಗೆ ಗಂಭೀರವಾಗಿ ಆಕ್ಷೇಪಿಸಿದ್ದು ಈ ಬಗ್ಗೆ ಕಾರಣ ಕೇಳುವ ಸೂಚನಾ ಪತ್ರವನ್ನು ಜಾರಿ ಮಾಡಿ, ಸೂಕ್ತ ವಿವರಣೆ/ಸಮಜಾಯಿಷಿ ನೀಡುವಂತೆ ತಿಳಿಸಿರುತ್ತಾರೆ. ಆದಾಗ್ಯೂ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಭವಿಷ್ಯ ನಿಧಿ ಕಾಯ್ದೆ 1952 ರ ಪುಕಾರ ನಿಯಮಾವಳಿ ಉಲ್ಲಂಘನೆಯಾಗಿರುವುದರಿಂದ ಕೇಂದ್ರೀಯ ಭವಿಷ್ಯ ಭವಿಷ್ಯ ನಿಧಿ ಆಯುಕ್ತರ ಕಛೇರಿಯಿಂದ ಹೊರಡಿಸಿರುವ ಪುಮಾಣಿತ ಕಾರ್ಯಚರಣೆ ವಿಧಾನಗಳ (Standard Operating Procedure) ಪುಕಾರ ಸಾರಿಗೆ ನಿಗಮಗಳಿಗೆ ಮಂಜೂರಾಗಿರುವ ಭ.ನಿ ವಿನಾಯಿತಿಯನ್ನು ರದ್ದುಪಡಿಸುವ ವಕ್ರಿಯ ಆರಂಭಿಸುವುದಾಗಿ ತಿಳಿಸಿರುತ್ತಾರೆ.
ಪ್ರಸ್ತುತ ಆಕರಿಸುತ್ತಿರುವ ಪ್ರಯಾಣಿಕರ ದರದಲ್ಲಿ ಕ್ರೋಡೀಕೃತ ಹೊಣೆಗಾರಿಕೆಯನ್ನು ಪಾವತಿಸಲು ಅವಕಾಶವಿರುವುದಿಲ್ಲ ಹಾಗೂ ನಿಗಮಗಳಲ್ಲಿ ಬೇರೆ ಯಾವುದೇ ಸಂಪನ್ಮೂಲಗಳೂ ಲಭ್ಯವಿಲ್ಲದೇ ಇರುವುದರಿಂದ ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಪಾವತಿ ಮಾಡಲು ಒಟ್ಟು ರೂ.5527.46 ಕೋಟಿಗಳ ಅವಶ್ಯಕತೆಯಿದ್ದು, ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ ರೂ.2901.53 ಕೋಟಿ ಹಾಗೂ ಇಂಧನದ ಬಾಕಿ ಮೊತ್ತ ರೂ.827.37 ಕೋಟಿ ಹೀಗೆ ಒಟ್ಟು ರೂ.3728.90 ಕೋಟಿಗಳ ಸಾಲದ ಅವಶ್ಯಕತೆ ಇರುತ್ತದೆ. ಸದರಿ ಸರ್ಕಾರದ ಬೆಂಬಲಿತ ಸಾಲವನ್ನು ಪಡೆಯಲು ಮಂಡಳಿ ನಿರ್ದೇಶಕರ ಅನುಮೋದನೆಯನ್ನು ಮುಂಬರುವ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸುತ್ತಾ, ನಿಗಮಗಳು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಾಗೂ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು ರೂ.3728.90 ಕೋಟಿ ಸಾಲದ ಅವಶ್ಯಕತೆ ಇದ್ದು, ಸದರಿ ಸಾಲದ ಮರುಪಾವತಿಗೆ ತಗಲುವ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವು ಭರಿಸಲು ಕೋರಿ, ಸಂಸ್ಥೆಗಳಿಗೆ ಸರ್ಕಾರದ ಸರ್ವೀಸ್ ಲೋನ್ (Government Service Loan) ಅನ್ನು ಪಡೆಯಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ನವೆಂಬರ್- 2024ರ ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತ ಪಾವತಿಸಲು ಈ ಕಳಕಂಡಂತೆ ನಿಗಮವಾರು ಒಟ್ಟು ರೂ.2000.00 ಕೋಟಿ (ಎರಡು ಸಾವಿರ ಕೋಟಿ ರೂ.ಗಳನ್ನು ಮಾತ್ರ) ಮೊತ್ತದ ಸರ್ಕಾರದ ಖಾತರಿ/ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಪಡೆಯಲು ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಲಾಗಿದೆ.
KSRTCಗೆ ರೂ.623.80 ಕೋಟಿ
ಬಿಎಂಟಿಸಿಗೆ ರೂ.589.20 ಕೋಟಿ
ವಾ ಕ ರ ಸಾ ಸಂಸ್ಥೆಗೆ ರೂ.646 ಕೋಟಿ
ಕೆಕೆ ರ ಸಾ ನಿಗಮಕ್ಕೆ ರೂ.141 ಕೋಟಿ ಸೇರಿದಂತೆ ಒಟ್ಟು 2000 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.
ಷರತ್ತು:
ಸದರಿ ಸಾಲದ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಂದ ಮರುಪಾವತಿಸತಕ್ಕದ್ದು.
ಸದರಿ ಮೊತ್ತವನ್ನು ಆಧ್ಯತೆಯ ಮೇರೆಗೆ ಇಂಧನ ಬಾಕಿ ಪಾವತಿಸಲು ಬಳಸಿಕೊಳ್ಳತಕ್ಕದ್ದು. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕ್ರೋಢೀಕೃತ ಟೆಂಡರ್‌ನ್ನು ಕರೆಯತಕ್ಕದ್ದು,
ಈ ಕುರಿತು ಬಳಕೆ ಪ್ರಮಾಣ ಪತ್ರ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 444 ವೆಚ್ಚ-11/2023 (E), ದಿನಾಂಕ:26.12.2024ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.