ಬೆಂಗಳುರು : ಸಾರಿಗೆ ನಿಗಮಗಳ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿ ರೂ. ವಿಮೆ ಸಿಗುವಂತೆ ಮಾಡಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ನಮ್ಮ ಸಾರಿಗೆ ನಿಗಮಗಳ ನೌಕರರು ಅಪಘಾತದಲ್ಲಿ ಮೃತಪಟ್ಟರೆ ₹1 ಕೋಟಿ ವಿಮೆ ಸಿಗುವಂತೆ ಮಾಡಿದ್ದೇವೆ. ಅಪಘಾತವಲ್ಲದ ಕಾರಣಕ್ಕೆ ಮೃತಪಟ್ಟರೆ ₹10 ಲಕ್ಷ, ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ₹10 ಲಕ್ಷ ಪರಿಹಾರ ನೀಡಲಾಗುತ್ತಿದೆ. ನೌಕರರ ಹೃದಯ ತಪಾಸಣೆ, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.