ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಇನ್ ಸ್ಟಾಗ್ರಾಂನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡಗೆ ರೇಣುಕಾಸ್ವಾಮಿ ಮರ್ಮಾಂಗದ ಫೋಟೋ ಕಳಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ಆಹ್ವಾನಿಸಿದ್ದೇ ದರ್ಶನ್ ಸಿಟ್ಟಿಗೆ ಕಾರಣ ಎನ್ನಲಾಗಿದೆ.
ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಪವಿತ್ರಾ ಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ವಿವಾದವಾಗಿತ್ತು. ಆ ವಿವಾದದ ಬಳಿಕ ಪವಿತ್ರಾಗೌಡರಿಗೆ ರೇಣುಕಾಸ್ವಾಮಿ ಕಾಟ ಶುರುವಾಗಿದೆ. ತನ್ನನ್ನು ದರ್ಶನ್ ಅಭಿಮಾನಿ ಎಂದು ಹೇಳಿಕಂಡಿದ್ದ ಆತ ಇನ್ ಸ್ಟಾಗ್ರಾಂನಲ್ಲಿ ಪವಿತ್ರಾಗೌಡರ ಫೋಟೋಗಳಿಗೆ ಅವಹೇಳನಕಾರಿಯಾಗಿ ಕಮೆಂಟ್ ಹಾಕಿದ್ದ ಎನ್ನಲಾಗಿದೆ.
ಪವಿತ್ರಾಗೌಡಗೆ ಖಾಸಗಿಯಾಗಿ ಆತ ನಿರಂತರವಾಗಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದ. ಇದು ಅತಿರೇಕಕ್ಕೆ ಹೋಗಿ ಮರ್ಮಾಂಗದ ಫೋಟೋ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಈ ಮೆಸೇಜ್ ಬಗ್ಗೆ ದರ್ಶನ್ ಗೆ ಪವಿತ್ರಾಗೌಡ ತಿಳಿಸಿದ್ದಳು. ಆಗ ಕೆರಳಿದ ದರ್ಶನ್, ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.