ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಬಂದಿದ್ದು, ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಕ್ಕೂ ಹೆಚ್ಚು ವಸ್ತುಗಳನ್ನು ಎಫ್ ಎಸ್ ಎಲ್ ಗೆ ಕಲುಹಿಸಲಾಗಿತ್ತು, ಇದೀಗ ಶೇ. 70 ರಷ್ಟು ಎಫ್ ಎಸ್ ಎಲ್ ವರದಿ ಬಂದಿದ್ದು, ನಟ ದರ್ಶನ್ & ಗ್ಯಾಂಗ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಎಫ್ ಎಸ್ ಎಲ್ ವರದಿಯಲ್ಲಿ ಪಟ್ಟಣಗೆರೆ ಶೆಡ್ ನಲ್ಲಿ ಸಿಕ್ಕ ಫಿಂಗರ್ ಪ್ರಿಂಟ್ ಗಳ ವರದಿ ಬಂದಿದೆ.
1 ಶವ ಸಾಗಿಸಿದ ಸ್ಕಾರ್ಪಿಯೋದಲ್ಲಿ ಫಿಂಗರ್ ಪ್ರಿಂಟ್ ವರದಿ
2 ಘಟನೆ ನಡೆದ ಜಾಗದಲ್ಲಿ ಸಿಕ್ಕ ಚಪ್ಪಲಿ ಹಾಗೂ ಶೂ ಮಾರ್ಕ್ಸ್ ಗಳ ವರದಿ
3 ಕೃತ್ಯಕ್ಕೆ ಬಳಸಿದ ವಾಹನಗಳು ಸಂಚರಿಸಿದ ಟೈರ್ ಗಳ ಮಾರ್ಕ್
4 ಹಲ್ಲೆಗೆ ಬಳಸಿದ್ದ ದೊಣ್ಣೆ, ರಾಡ್ ಗಳ ಮೇಲಿನ ರಕ್ತದ ಕಲೆ ವರದಿ
5ಪೊಲೀಸರು ಸಂಗ್ರಹಿಸಿದ್ದ ಬಟ್ಟೆಗಳಲ್ಲಿ ರಕ್ತದ ಕಲೆಗಳ ವರದಿ
6 ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ
7 ಮ್ಯಾಚ್ ಆಗ್ತಿರೋ ಫಿಂಗರ್ ಪ್ರಿಂಟ್ ಳ ಪರಿಶೀಲನಾ ವರದಿ
8 ಆರೋಪಿಗಳ ಹೇಳಿಕೆ, ಎಳ್ ಎಸ್ ಎಲ್ ವರದಿ ಹೋಲಿಕೆ
9 ಆರೋಪಿಗಳ ಬಟ್ಟೆಗಳಲ್ಲಿ ರಕ್ತದ ಕಲೆಗಳ ಹೋಲಿಕೆ