ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತೊಂದು ಸ್ಪೋಟಕ ಮಾಹಿತಿ ಸಿಕ್ಕಿದ್ದು, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವನ್ನು ದರ್ಶನ್ ಸಹಚರರು ರೆಕಾರ್ಡ್ ಮಾಡಿದ್ದಾರು ಎನ್ನಲಾಗಿದೆ.
ಚಿತ್ರದುರ್ಗದಿಂದ ಬಂದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ಗೆ ಕರೆದುಕೊಂಡಿ ಹೋಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಹೊಡೆಯುತ್ತಿರುವ ದೃಶ್ಯವನ್ನು ಪ್ರದೂಷ್ ರೆಕಾರ್ಡ್ ಮಾಡಿದ್ದಾನೆ. 3 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಪ್ರದೂಷ್ ತನ್ನ ವಿಡಿಯೋ ಮಾಡಿದ್ದ ಎನ್ನಲಾಗಿದ್ದು, ಈಗ ಪೊಲೀಸರು ಡಿಲೀಟ್ ಆಗಿರುವ ದೃಶ್ಯವನ್ನು ರಿಟ್ರೀವ್ ಗೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್‌ಗೆ ಐಫೋನ್ ರವಾನಿಸಿದ್ದಾರೆ. ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್‌ಗೆ ಸಿಐಡಿ (CID) ಮುಂದಾಗಿದೆ ಎಂದು ಹೇಳಲಾಗುತ್ತಿದೆ.