ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ವಿಭಾಗದ 07 ಜಿಲ್ಲೆಗಳ 1345 ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ‘ಪರಿಹಾರ ಬೋಧನೆ” ತರಗತಿಗಳನ್ನು ಹಮ್ಮಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಪ್ರಸ್ತಾವನೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶದ 07 ಜಿಲ್ಲೆಗಳ ಫಲಿತಾಂಶ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕಡಿಮೆಯಾಗಿರುವುದು ಗಮನಿಸಬಹುದು. ಪ್ರಸಕ್ತ ಸಾಲಿನ ಫಲಿತಾಂಶ ಉತ್ತಮ ಪಡಿಸಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಜಾರಿಮಾಡುವುದರ ಜೊತೆಗೆ ಕೆಕೆಆರ್ಡಿಬಿ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ) ವತಿಯಿಂದ ಫಲಿತಾಂಶ ಸುಧಾರಣೆಗಾಗಿಯೇ ದೊರೆಯುವ ಅನುದಾನ ಬಳಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದ್ದು, ಅನುಮೋದನೆಗಾಗಿ ಸಲ್ಲಿಸಿರುತ್ತಾರೆ.
ಕಲಬುರಗಿ ವಿಭಾಗದ ಎಲ್ಲಾ 1345 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಎಲ್ಲಾ ಪ್ರೌಢ ಶಾಲೆಗಳಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಿ, ಪರಿಹಾರ ಬೋಧನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲಾ 06 ವಿಷಯಗಳ ಶಿಕ್ಷಕರು ಪರಿಹಾರ ಬೋಧನೆ ಕಾರ್ಯದಲ್ಲಿ ಪಾಲಗೊಳ್ಳುವರು. ಶಾಲೆಯಲ್ಲಿ ಶಿಕ್ಷಕರ ಲಭ್ಯತೆಯಾಗದ ಪಕ್ಷದಲ್ಲಿ ಶಿಕ್ಷಕರಿಗೆ ನೀಡುವ ಪ್ರೋತ್ಸಾಹ ಧನ, ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ರೂಪದಲ್ಲಿ ನೀಡಬಹುದಾಗಿದೆ. ಸ್ಥಳೀಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರೆ ಊರಿನಿಂದ ಬಂದು ಹೋಗುವ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚ ಭರಿಸಲು ಅನುದಾನದ ಅವಶ್ಯಕತೆ ಇರುತ್ತದೆ.
7 ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಕಡಿಮೆಯಾಗುತ್ತಿರುವುದನ್ನು ತಪ್ಪಿಸಲು ಅಲ್ಪಾವಧಿ ಯೋಜನೆಯಾಗಿ ಮುಂಬರುವ 03 ತಿಂಗಳಿಗಾಗಿ ಪರಿಹಾರ ಬೋಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಕಳೆದ ವರ್ಷದ ಕಲಬುರಗಿ ವಿಭಾಗದ ಎಸ್.ಎಸ್.ಎಲ್.ಸಿ ಫಲಿತಾಂಶ ಈ ಕೆಳಕಂಡಂತಿದೆ.










