ಬೆಂಗಳೂರು : 2026ರ ದ್ವಿತೀಯ ಪಿಯುಸಿ ಎಲ್ಲಾ ಪರೀಕ್ಷಾ ಕಾರ್ಯಗಳಿಗೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು/ಉಪನ್ಯಾಸಕರನ್ನು ಮಂಡಲಿಯ ಜಾಲತಾಣದ PU EXAM PORTAL ನಲ್ಲಿ ನೋಂದಣಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2026 ರ ದ್ವಿತೀಯ ಪಿ.ಯು.ಸಿ ಪ್ರಾಯೋಗಿಕ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕರುಗಳ (ಖಾಯಂ, ಅತಿಥಿ ಹಾಗೂ ಅರೆಕಾಲಿಕ ಉಪನ್ಯಾಸಕರು) ಮಾಹಿತಿಯೊಂದಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಜಾಲತಾಣ PU EXAM PORTAL ನಲ್ಲಿ ಕಡ್ಡಾಯವಾಗಿ ದಿನಾಂಕ 31.12.2025 ರೊಳಗೆ ನೋಂದಾಯಿಸಲು, ಪ್ರಾಂಶುಪಾಲರಿಗೆ ಈ ಮೂಲಕ ಸೂಚಿಸಿದೆ.
ಸದರಿ ಮಾಹಿತಿಯನ್ನು ನಮೂದಿಸಲು ಪ್ರಾಂಶುಪಾಲರು ಪಾಲಿಸಬೇಕಾದ ಕ್ರಮಗಳ ವಿವರ ಕೆಳಗಿನಂತಿದೆ. EVALUATORS DETAILS 1. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಜಾಲತಾಣದ PU EXAM PORTAL 2 2026 II PU EXAM -1 ವರ್ಷದ EVALUATORS ಗಳನ್ನು Update ಮಾಡಲು ಅಥವಾ ಹೊಸ Evaluators ಗಳನ್ನು ಸೇರಿಸಲು, “ADD EVALUATOR” ಎಂಬ ಮೆನುವನ್ನು ಆಯ್ಕೆ ಮಾಡಿಕೊಳ್ಳುವುದು. ನಂತರ ಅಲ್ಲಿ ಬರುವ CONSENT FORM ಅನ್ನು ಓದಿಕೊಂಡು ತಮ್ಮ ಸಮ್ಮತಿಯನ್ನು “ಹೌದು” ಎಂದು CLICK ಮಾಡಿ ನಂತರ ”I AGREE” ಮತ್ತು “START EKYC” ಅನ್ನು CLICK ಮಾಡಬೇಕು. ಮುಂದಿನ WEBPAGE ನಲ್ಲಿ ನೋಂದಣಿ ಮಾಡುವ ಪ್ರಾಂಶುಪಾಲರ/ಉಪನ್ಯಾಸಕರ “ಆಧಾರ್ ಸಂಖ್ಯೆ’ ಯನ್ನು ನಮೂದಿಸಿ, ಮುಂದಿನ PARAGRAPH ನಲ್ಲಿ ಕೊಟ್ಟಿರುವ “BOX” ನಲ್ಲಿ TIK ಮಾಡಿದ ನಂತರ “OTP” ಯನ್ನು ಅಯ್ಕೆ ಮಾಡಿಕೊಂಡು “OTP ಪಡೆಯಿರಿ” ಕ್ಲಿಕ್ ಮಾಡಿದಾಗ, ಪ್ರಾಂಶುಪಾಲರ/ಉಪನ್ಯಾಸಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಈ “OTP ಯನ್ನು ನಮೂದಿಸಿದ” ನಂತರ ತಮ್ಮ ನೋಂದಣಿಯ WEB PAGE ತೆರೆದುಕೊಳ್ಳುತ್ತದೆ. ಇಲ್ಲಿ ಸಂಬಂಧಿಸಿದ ಪ್ರಾಂಶುಪಾಲರ ಅಥವಾ ಉಪನ್ಯಾಸಕರ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸುವುದು.









