ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದರ್ಶನ್ ವಿರುದ್ಧ ಎರಡು ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಎರಡೂ ಎಫ್ ಐಆರ್ ನಲ್ಲಿ ಡಿ ಬಾಸ್ ಎಂದು ಹೆಸರು ಉಲ್ಲೇಖಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.ಈ ಮೂರು ಪ್ರಕರಣಗಳ ಪೈಕಿ 2 ಕೇಸ್ ನಲ್ಲಿ ನಟ ದರ್ಶನ್ ಎ 1 ಆರೋಪಿಯಾಗಿದ್ದಾರೆ. ಎಫ್ ಐ ಆರ್ ಗಳಲ್ಲಿ ದರ್ಶನ್ ಅಲಿಯಾಸ್ ‘ಡಿ ಬಾಸ್’ ಎಂದು ಉಲ್ಲೇಖಿಸಲಾಗಿದೆ.
ಮೊದಲನೇ ಪ್ರಕರಣದಲ್ಲಿ ದರ್ಶನ್ ಎ1, ನಾಗರಾಜ್ ಎ2, ವಿಲ್ಸನ್ ಗಾರ್ಡನ್ ನಾಗ ಎ3, ಕುಳ್ಳ ಸೀನ ಎ4 ಆರೋಪಿಗಳಾಗಿದ್ದಾರೆ. 2ನೇ ಪ್ರಕರಣದಲ್ಲಿ ನಟ ದರ್ಶನ್ ಎ1, ಧರ್ಮ ಎ2, ಸತ್ಯ ಎ3 ಆರೋಪಿಗಳಾಗಿದ್ದಾರೆ. ಮೂರನೇ ಪ್ರಕರಣದಲ್ಲಿ ಕೆ.ಎಸ್. ಸುದರ್ಶನ್ ಎ1, ಮುಜೀಬ್ ಎ2, ಪರಮೇಶ್ ನಾಯಕ ಲಮಾಣಿ ಎ3, ಕೆ.ಬಿ. ರಾಯಮನೆ ಎ4 ಆರೋಪಿಗಳಾಗಿದ್ದಾರೆ.
ನಟ ದರ್ಶನ್ ಗೆ ಪ್ರತಿದಿನ ಶಿವಾಜಿ ಹೋಟೆಲ್ ನಿಂದ ಬಿರಿಯಾನಿ ಪೂರೈಕೆ!
ನಟ ದರ್ಶನ್ ಗೆ ಟೀ, ಸಿಗರೇಟ್ ಮುಂತಾದವುಗಳ ಜೊತೆಗೆ ಹೋಟೆಲ್ ನಿಂದ ಬಿರಿಯಾನಿ ಸಹ ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್, ಜೈಲಿನೊಳಗೆ ಸಿಗರೇಟು ಸೇದುತ್ತಿರುವ ಫೋಟೋ ಹಾಗೂ ವಿಡಿಯೋ ಕಾಲಿಂಗ್ ಮಾಡಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನಟ ದರ್ಶನ್ ಗೆ ಪ್ರತಿದಿನ ಬಿರಿಯಾನಿ ಪೂರೈಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದೀಗ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.