ಬೆಂಗಳೂರು:ರಾಷ್ಟ್ರ ರಕ್ಷಣಾ ಪಡೆ ವಾಟ್ಸಾಪ್ ಗ್ರೂಪ್ನಲ್ಲಿ ಗಲಭೆ ಎಬ್ಬಿಸುವ ಮೆಸೇಜ್ ಮೂಲಕ ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಿಸಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗವು ಸೈಬರ್ ಕ್ರೈಂಗೆ ದೂರು ನೀಡಿದೆ.
ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ. ರಾಷ್ಟ್ರ ರಕ್ಷಣಾ ಪಡೆ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಒಂದು ಹರಿದಾಡುತ್ತಿದೆ ಎಂದು ದೂರಿನಲ್ಲಿ ಹೇಳಿದೆ. ಕೂಡಲೇ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸೋದಕ್ಕೆ ಬಿಜೆಪಿ ಬೆಂಬಲ ಕೊಟ್ಟಿದೆ. ಆದುದರಿಂದ ಎಲ್ಲಾ ಕಾರ್ಯಕರ್ತರು ರೆಡಿಯಾಗಿ ಇರಿ. ಎಲ್ಲಿ ಏನು ಮಾಡಬೇಕು ಅಂತ ಈ ಗ್ರೂಪಿನ ಮೂಲಕ ಮಾಹಿತಿ ಕೊಡುತ್ತೇವೆ. ಜೈ ರಾಷ್ಟ್ರ ರಕ್ಷಣಾ ಪಡೆ 2024ಕ್ಕೆ ಮತ್ತೊಮ್ಮೆ ಮೋದಿ ಎಂಬ ಸಂದೇಶ ಹಾಕಿ ಕೋಮುಗಲಭೆಗೆ ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ದೂರು ನೀಡಿದೆ. ಇನ್ನು ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಹಾಕಿರುವ ನಂಬರ್ ಅನ್ನು ಟ್ರೂ ಕಾಲರ್ನಲ್ಲಿ ಚೆಕ್ ಮಾಡಿದಾಗ ಪುನೀತ್ ಕೆರೆಹಳ್ಳಿ ನಂಬರ್ ಎಂದ ತಿಳಿದು ಬಂದಿದೆ. ಜನಾಂಗೀಯ ದ್ವೇಷ ಹುಟ್ಟಿಸುವ ಈತನನ್ನ ಬಂಧಿಸಬೇಕು. ಅದ್ಯಾವ ಬಿಜೆಪಿ ಮುಖಂಡ ಈತನಿಗೆ ಸುಪಾರಿ ಕೊಟ್ಟಿದ್ದಾನೆಂದು ತನಿಖೆ ಆಗಬೇಕು ಎಂದು ಕಾಂಗ್ರೆಸ್ ದೂರು ನೀಡಿದೆ.