ಬೆಂಗಳೂರು : ಆನ್ಲೈನ್ ಮೂಲಕ ಬಿ ಖಾತಾದಿಂದ ಎ ಖಾತ ಮಾನ್ಯತೆ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಹತ್ವದ ಹೇಳಿಕೆ ನೀಡಿದ್ದು, ಬಿ ಖಾತದಿಂದ ಎ ಖಾತ ಕೊಡಲು ಸರಕಾರದಿಂದ ಆದೇಶ ಆಗಿದೆ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.
ಎರಡು ವಾರದಲ್ಲಿ ಈ ಬಗ್ಗೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡುತ್ತೇವೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಎರಡು ವಾರದಲ್ಲಿ ಅವಕಾಶ ನೀಡುತ್ತೇವೆ. ಏನು ನಿಯಮಗಳು ಇರುತ್ತವೋ ಅದನ್ನು ಫಾಲೋ ಮಾಡಬೇಕಾಗುತ್ತದೆ. ಎ ಖಾತ ಮಾಡಿಸಿಕೊಳ್ಳುವುದಕ್ಕೆ ಎಷ್ಟು ಹಣ ಭರಿಸಬೇಕೆಂಬುದರ ಕುರಿತು ಚರ್ಚಿಸಲಾಗಿದ್ದು, ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.ಹೊಸ ಮಾರ್ಗಸೂಚಿಯಲ್ಲಿಯೇ ಎಲ್ಲ ಮಾಹಿತಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ಹೇಳಿಕೆ ನೀಡಿದರು.
ಆನ್ಲೈನ್ ವ್ಯವಸ್ಥೆಯನ್ನು ಸುಮಾರು 15 ದಿನಗಳಲ್ಲಿ ಆರಂಭಿಸಲಾಗುತ್ತಿದೆ.ಆದ್ದರಿಂದ ದಯವಿಟ್ಟು ಕಾಯಿರಿ.ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದ ನಂತರ ನಾಗರಿಕರು ಕೆಳಗಿನಂತೆ ಅರ್ಜಿ ಸಲ್ಲಿಸಬಹುದು.
(ii) a fresh/new A-Khata if they do not have any khata at present.
DO NOT GO TO ANY BBMP OFFICE & DO NOT APPROACH ANY MIDDLEMEN
DO NOT BRIBE ANYONE
ONLINE SYSTEM WILL BE ROLLED OUT SOON.
M Maheshwar Rao, IAS,
Chief Commissioner, #BBMP#DKShivakumar #bbmpchiefcommissioner— Bruhat Bengaluru Mahanagara Palike (@BBMPofficial) July 28, 2025
ಇ ಖಾತಾ’ ಪಡೆಯಲು ಎಷ್ಟು ಹಣ ಪಾವತಿಸಬೇಕು..?
BBMPeAasthi.karnataka.gov.in ನಲ್ಲಿ ನೀವೇ ಸ್ವತ ಅಂತಿಮ ಇ ಖಾತಾ ಡೌನ್ ಲೋಡ್ ಮಾಡಿಕೊಳ್ಳಲು ರೂ.125.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವೆಯನ್ನು ಪಡೆಯಲು (ಬಿ.ಬಿ.ಎಂ.ಪಿ ಗೆ ರೂ. 125/- + ಬಿ-ಒನ್ಗೆ ಸೇವಾ ಶುಲ್ಕವನ್ನು ರೂ. 45/- ಮತ್ತು ಪ್ರತಿ ಪುಟದ ಸ್ಕ್ಯಾನ್ಗಾಗಿ ರೂ. 5/-) ಪಾವತಿಸುವುದು.
ಜನಸೇವಕರ ಮೂಲಕ ನಿಮ್ಮ ಮನೆ ಬಾಗಿಲಿಗೆ ಇ-ಖಾತಾ ಸೇವೆಯನ್ನು ಪಡೆಯಲು (ಬಿ.ಬಿ.ಎಂ.ಪಿ ಗೆ ರೂ.125/- ಹಾಗೂ ಜನಸೇವಕ ಶುಲ್ಕ[45+115]=160/-ಮತ್ತು ಪ್ರತಿ ಪುಟದ ಸ್ಕ್ಯಾನ್ಗಾಗಿ ರೂ. 5/-) ಪಾವತಿಸುವುದು.
ಜನಸೇವಕರಿಂದ ಸೇವೆ ಪಡೆಯಲು ಕರೆ ಮಾಡಿ 080 – 4920 3888 ಅಥವಾ ಆನ್ಲೈನ್ ಮೂಲಕ ಬುಕ್ ಮಾಡಲು
@https://janasevaka.karnataka.gov.in
ಈ ದಾಖಲೆಗಳ ಜೊತೆ ಸಿದ್ದವಿರಿ
ಮಾಲೀಕರ ಆಧಾರ್
ಆಸ್ತಿ ತೆರಿಗೆ ಎಸ್.ಎ.ಎಸ್. ಅರ್ಜಿ ಸಂಖ್ಯೆ
ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತದೆ)
ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
ಸ್ವತ್ತಿನ ಛಾಯಾಚಿತ್ರ
ಇ-ಖಾತಾ ಸಹಾಯವಾಣಿಗೆ ಕರೆ ಮಾಡಿ (94806 83695) ಮಾಹಿತಿ ಪಡೆಯಬಹುದು.
(i) ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದು
ಅಥವಾ
(ii) ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು
ಯಾವುದೇ ಬಿಬಿಎಂಪಿ ಕಚೇರಿಗೆ ಹೋಗಬೇಡಿ ಮತ್ತು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ.ಯಾರಿಗೂ ಲಂಚ ನೀಡಬೇಡಿ ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ
ಎಂ ಮಹೇಶ್ವರ ರಾವ್ ತಿಳಿಸಿದ್ದಾರೆ.