ಬೆಂಗಳೂರು : 27.03.2025ರ ಕರ್ನಾಟಕ ಸರ್ಕಾರದ ಅಧಿಸೂಚನೆಯನ್ವಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ಜಿಪಿಟಿ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ-2 ಶಿಕ್ಷಕರಾಗಿ ಬಡ್ತಿ ನೀಡುವ ಕುರಿತು ಶಾಲಾ ಶಿಕ್ಷಣ ಮಹತ್ವದ ಮಾಹಿತಿ ನೀಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ1ರ ಸರ್ಕಾರದ ಅಧಿಸೂಚನೆ ಯನ್ವಯ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ ಜಿಪಿಟಿ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ-2 ಶಿಕ್ಷಕರಾಗಿ ಮುಂಬಡ್ತಿ ನೀಡುವ ಬಗ್ಗೆ ಸ್ಪಷ್ಟಿಕರಣ ನೀಡಿ, ಈ ಕೆಳಗಿನಂತೆ ನಿರ್ದೇಶನ ನೀಡಲಾಗಿದೆ.
“2. ವೇಳಾಪಟ್ಟಿಯ ತಿದ್ದುಪಡಿ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ಸಾರ್ವಜನಿಕ ಸೂಚನೆಗಳ ಇಲಾಖೆ) (ನೇಮಕಾತಿ) ನಿಯಮಗಳು, 1967 ರಲ್ಲಿ, ವೇಳಾಪಟ್ಟಿಯಲ್ಲಿ, ವರ್ಗ III, ನಾನ್-ಗೆಜೆಟೆಡ್ ಹುದ್ದೆಗಳ ಅಡಿಯಲ್ಲಿ, ಕ್ರಮ ಸಂಖ್ಯೆ 37 ರಲ್ಲಿ, “II ಸೆಕೆಂಡ್ (II ಸೆಕೆಂಡ್ ಸ್ಕೂಲ್) ಸಹಾಯಕ ಹುದ್ದೆಗಳಿಗೆ ಸಂಬಂಧಿಸಿದ ನಮೂದುಗಳಲ್ಲಿ. ನೇಮಕಾತಿಯ” ಐಟಂ (ii) ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳಿಗೆ, ಈ ಕೆಳಗಿನವುಗಳನ್ನು ಬದಲಿಸಬೇಕು, ಅವುಗಳೆಂದರೆ:-
“(ii) 1 ರಿಂದ 5 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಸಹಾಯಕ ಮಾಸ್ಟರ್ / ಪ್ರೇಯಸಿ ವರ್ಗಗಳಿಂದ ಬಡ್ತಿ ಮೂಲಕ ಐವತ್ತು ಪ್ರತಿಶತ 60:30:04:02:02:02
ಪರಂತು, ಕ್ರಾಫ್ಟ್ ಟೀಚರ್ ಗ್ರೇಡ್ 1, ನರ್ಸರಿ ಸ್ಕೂಲ್ ಟೀಚರ್ಸ್, ಡ್ರಾಯಿಂಗ್ ಟೀಚರ್‌ಗಳ ಕೇಡರ್‌ಗಳಲ್ಲಿ ಸಾಕಷ್ಟು ಶೇಕಡಾವಾರು ಶಿಕ್ಷಕರ ಅನುಪಾತವು ಬಡ್ತಿಗೆ ಲಭ್ಯವಿಲ್ಲದಿದ್ದರೆ, ಅಂತಹ ಸಂಖ್ಯೆಯ ಹುದ್ದೆಗಳನ್ನು 1 ರಿಂದ 5 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಸಹಾಯಕ ಮಾಸ್ಟರ್ / ಪ್ರೇಯಸಿ ಮತ್ತು 8 ನೇ ತರಗತಿಯ ಸಹಾಯಕ, 8 ನೇ ತರಗತಿಯ ಪ್ರಾಥಮಿಕ ಶಾಲಾ ಪದವೀಧರರಿಂದ ಬಡ್ತಿ ಮೂಲಕ ಭರ್ತಿ ಮಾಡಲಾಗುವುದು. ಅನುಪಾತ
ಮೇಲ್ಕಂಡ ಅಧಿಸೂಚನೆಯನ್ನು ಅನುಷ್ಠಾನಗೊಳಿಸಲು ವಿಭಾಗದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರುಗಳು ಕಾರ್ಯ ಪ್ರವೃತ್ತರಾಗಬೇಕಿದೆ. ಹಾಗೂ ಈ ಕೆಳಕಂಡ ನಿರ್ದೇಶನದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
1. ಕಲ್ಯಾಣ ಕರ್ನಾಟಕದಲ್ಲಿ ದಿನಾಂಕ: 10.03.2025 ರಲ್ಲಿದಂತೆ, ಒಟ್ಟಾರೆ ಮಂಜೂರಾದ ಜಿಪಿಟಿ ಹುದ್ದೆಗಳು: 12609 ಇರುತ್ತದೆ. ಕಾರ್ಯ ನಿರ್ವಹಿಸುತ್ತಿರುವ ಜಿಪಿಟಿ ಶಿಕ್ಷಕರ ಸಂಖ್ಯೆ: 6977 ಇರುತ್ತದೆ.
2. ಕಲ್ಯಾಣ ಕರ್ನಾಟಕದಲ್ಲಿ (PST-Primary School Teacher) ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು ಮಂಜೂರಾದ ಹುದ್ದೆಗಳು: 27027 ಇರುತ್ತದೆ. ಇದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ: 18498 ಇರುತ್ತದೆ. ಅದರಲ್ಲಿ LC-DR (Local Cadre- Direct Recruitment) 15376 RPC-DR (Residual Parent Cadre Direct Recruitment) 3122 ಹುದ್ದೆಗಳಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
3. ಕಲ್ಯಾಣ ಕರ್ನಾಟಕದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಲ್ಲಿ (HS AM- High School Assistant Master) 2256 LC-PR (Local Cadre-Promotion) . 622 RPC-PR (Residual Parent Cadre-Promotion) .
4. ಈ ಖಾಲಿ ಹುದ್ದೆಗಳನ್ನು ಉಲ್ಲೇಖ(1)ರ ಅಧಿಸೂಚನೆ ಯಂತೆ 60:30:04:02:02:02 ಅನುಪಾತದಂತೆ ತುಂಬಬೇಕಾಗುತ್ತದೆ. ಇದರಲ್ಲಿ PST LC-PR (Primary School Teacher Local Cadre-Promotion) 1354 ซอ GPT LC-PR (Graduate Primary Teacher Local Cadre-Promotion) 677 ಶಿಕ್ಷಕರಿಂದ ಹಾಗೂ ಇನ್ನುಳಿದಂತೆ ಚಿತ್ರಕಲೆ, ವೃತ್ತಿ ಶಿಕ್ಷಕರು, ಸಂಗೀತ ಮತ್ತು ನರ್ಸರಿ ಶಾಲಾ ಶಿಕ್ಷಕರುಗಳಿಂದ 225 ಹುದ್ದೆಗಳನ್ನು ತುಂಬಬೇಕು. ಸದರಿ ಖಾಲಿ ಹುದ್ದೆಗಳ ಜಿಲ್ಲಾವಾರು ಹಾಗೂ ವಿಷಯವಾರು ಮಾಹಿತಿಯನ್ನೊಳಗೊಂಡ ಪಟ್ಟಿ ಅನುಬಂಧ-1 ರಂತೆ ಲಗತ್ತಿಸಿದೆ.
5. 622 RPC-PR (Residual Parent Cadre-Promotion) ໙໙ (1) ಅಧಿಸೂಚನೆ ಯಂತೆ 60:30:04:02:02:02 ಅನುಪಾತದಂತೆ ತುಂಬ ಬೇಕಾಗುತ್ತದೆ. ಇದರಲ್ಲಿ PST RPC-PR (Primary School Teacher Residual Parent Cadre-Promotion) 374 GPT RPC-PR (Graduate Primary School Teacher Residual Parent Cadre-Promotion)186 ಶಿಕ್ಷಕರಿಂದ ಹಾಗೂ ಇನ್ನುಳಿದಂತೆ ಚಿತ್ರಕಲೆ, ವೃತ್ತಿ ಶಿಕ್ಷಕರು, ಸಂಗೀತ ಮತ್ತು ನರ್ಸರಿ ಶಾಲಾ, ಶಿಕ್ಷಕರುಗಳಿಂದ 62 ಹುದ್ದೆಗಳನ್ನು ತುಂಬಬೇಕು. ಸದರಿ ಖಾಲಿ ಹುದ್ದೆಗಳ ಜಿಲ್ಲಾವಾರು ಹಾಗೂ ವಿಷಯವಾರು ಮಾಹಿತಿಯನ್ನೊಳಗೊಂಡ ಪಟ್ಟಿ ಅನುಬಂಧ-1 ರಂತೆ ಲಗತ್ತಿಸಿದೆ.
6. ಮುಂದುವರೆದು ಬಡ್ತಿ ನೀಡಿ, ಕೌನ್ಸಿಲಿಂಗ್ ಸಂದರ್ಭದಲ್ಲಿ ‘C’ ವಲಯ ತುಂಬಿದ ನಂತರವೇ ನಿಯಮಾನುಸಾರ ಕ್ರಮೇಣವಾಗಿ ‘B’ ಹಾಗೂ ‘A’ ವಲಯದ ಹುದ್ದೆಗಳನ್ನು ತುಂಬುವುದು. ಒಟ್ಟಾರೆಯಾಗಿ ತಾವು ಈ ಮುಂಬಡ್ತಿ ಪಕ್ರಿಯೆ ಸಂಬಂಧ ಕ್ರಮ ಕೈಗೊಳ್ಳಬೇಕಾದ ವೇಳಾ ಪಟ್ಟಿ ಈ ಕೆಳಗಿನಂತಿರುತ್ತದೆ.