ಬೆಂಗಳೂರು : ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ್ ಸುರಕ್ಷಾ ಯೋಜನೆಗಳ ಅಡಿಯಲ್ಲಿ ಸ್ವಇಚ್ಛೆಯಿಂದ ವಿಮ ಮಾಡಿಸುವಂತೆ ಸೂಚನೆ ನೀಡಲಾಗಿದೆ.
ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳು ನೌಕರರು ತಮ್ಮ ಜೀವನದ ಅನಿಶ್ಚಿತತೆಗಳನ್ನು ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸಲು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಪ್ರಧಾನ ಮಂತ್ರಿ ಜನ್ ಸುರಕ್ಷಾ ಯೋಜನೆಗಳಾದ ‘ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (PMUBY) ಯೋಜನೆಯು ಅವಧಿ ವಿಮಾ (Term Insurance) ಯೋಜನೆ ಮತ್ತು ‘ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನ’ (PMSBY) ಅಪಘಾತ ವಿಮ ಯೋಜನೆಯಾಗಿದ್ದು, ಅತೀ ಕಡಿಮೆ ಪ್ರೀಮಿಯಂನಲ್ಲಿ ರೂ.ಒಂದು ಲಕ್ಷ ವಿಮಾ ಸೌಲಭ್ಯ ಒದಗಿಸುತ್ತಿದ್ದು ವಿವರಗಳು ಈ ಕಳಗಿನಂತಿವೆ.
ಸದರಿ ವಿಮಯನ್ನು ಅಧಿಕಾರಿ/ಸಿಬ್ಬಂದಿಗಳು ಸ್ವ-ಇಚ್ಛೆಯಿಂದ ಮಾಡಿಸಬಹುದಾಗಿರುತ್ತದೆ ಅದ್ದರಿಂದ ಸದರಿ ವಿಷಯವನ್ನು ತಮ್ಮ ಘಟಕದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಗಮನಕ್ಕೆ ತರುವಂತೆ ಹಾಗೂ ಈ ಬಗ್ಗೆ ಹೆಚ್‌ಆರ್‌ಎಂಎಸ್-2 ತಂತ್ರಾಂಶದಲ್ಲಿ ಸಂಯೋಜಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.