Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM

ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ತಬ್ಧ: ‘ರಾಸಾಯನಿಕ ವಾಸನೆ’ಯಿಂದ ಪ್ರಯಾಣಿಕರಲ್ಲಿ ಆತಂಕ

14/03/2026 1:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !
KARNATAKA

BIG NEWS : ಪೊಲೀಸರು `ಪೋಕ್ಸೋ ಕೇಸ್’ ಗಳಲ್ಲಿ ಸಂತ್ರಸ್ತರ ಹೆಸರು, ವಿಳಾಸಗಳ ಗೌಪತ್ಯೆ ಕಾಪಾಡುವುದು ಕಡ್ಡಾಯ !

By kannadanewsnow5718/02/2026 6:46 AM

ಬೆಂಗಳೂರು : ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ಪೊಲೀಸರು ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವುದು ಕಡ್ಡಾಯವಾಗಿದೆ.

ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ದಾಖಲು ಮಾಡುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ ಮತ್ತು ತನಿಖಾ ವರದಿಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪತ್ಯೆಯನ್ನು ಕಾಪಾಡುವ ಸಂಬಂಧ ಉಲ್ಲೇಖಿ-(1)ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಪಾಲಿಸುವಂತೆ ಆದೇಶಿಸಲಾಗಿರುತ್ತದೆ. ಅದರಂತೆ ನ್ಯಾಯಾಲಯದ ಆದೇಶದಂತೆ ಮಹಿಳೆ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ಗುರುತು ಮತ್ತು ವಿಳಾಸವನ್ನು ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕಗೊಳಿಸದಂತೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಈ ಕಛೇರಿಯಿಂದ ಉಲ್ಲೇಖಿತ-2ರ ಸ್ಥಾಯಿ ಆದೇಶದಲ್ಲಿ ಸೂಚನೆ ನೀಡಲಾಗಿತ್ತು.

ಆದರೆ ಈ ಕಛೇರಿಯು ಸ್ಥಾಯಿ ಆದೇಶ ಸಂ. 1024 ರಲ್ಲಿ ನ್ಯಾಯಾಲಯದ ತೀರ್ಪಿನಲ್ಲಿ ನೀಡಿದ ಸೂಚನೆಗಳನ್ನು ನೀಡಿದ್ದರು ಸಹ ಕೆಲವು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳು ಮಹಿಳೆಯರ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಪೋಕೋ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಪ್ರಥಮ ವರ್ತಮಾನ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು ಮತ್ತು ವಿಳಾಸಗಳನ್ನು ಸಾರ್ವಜನಿಕಗೊಳಿಸುವ ಮತ್ತು ತನಿಖಾ ವರದಿಯಲ್ಲಿಯೂ ಸಹ ಗೌಪ್ಯತೆಯನ್ನು ವಿಚಾರಣೆ ಕಾಪಾಡಿಕೊಳ್ಳದೇ ಇರುವುದು ಕಂಡುಬಂದಿದ್ದು, ಇದರಿಂದ ಪ್ರಕರಣಗಳು ನ್ಯಾಯಾಲಯದ ಸಂದರ್ಭದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ, ಆದುದರಿಂದ ಇನ್ನುಮುಂದೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಮತ್ತು ತನಿಖಾಧಿಕಾರಿಗಳಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ಅಪ್ರಾಪ್ತರ ಹೆಸರು ಮತ್ತು ವಿಳಾಸಗಳ ಗೌಪ್ಯತೆಯನ್ನು ಕಾಪಾಡಿ, ಸಲ್ಲಿಸುವ ದಾಖಲಾತಿಗಳಲ್ಲಿ ಹೆಸರು, ಗುರುತು ಮತ್ತು ವಿಳಾಸವನ್ನು ಗೌಪ್ಯತೆ ಕಾಪಾಡುವ ಕುರಿತಂತೆ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

1. ಮೂಲ ದೂರು ಅರ್ಜಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಹೆಸರು, ವಿಳಾಸ ಮತ್ತು ಗುರುತುಗಳ ವಿವರಗಳ ಇರತಕ್ಕದ್ದು.

2. ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿ/ ತನಿಖಾಧಿಕಾರಿಯು ಸದರಿ ಮೂಲ ದೂರಿನಲ್ಲಿನ ನೊಂದವರ ಗುರುತುಗಳ ಗೌಪ್ಯತೆ ಕಾಪಾಡಲು ಮೂಲ ಹೆಸರಿನ ಬದಲು ಬೇರೆ ಹೆಸರನ್ನು ಅಥವಾ ಅಕ್ಷರಗಳನ್ನು ನೀಡಿ ನ್ಯಾಯಾಲಯಕ್ಕೆ ಮೂಲ ದೂರು ಮತ್ತು ಯಾವ ಬದಲಿ ಹೆಸರು ನೀಡಲಾಗಿದೆ ಎಂಬುದನ್ನು ಸೀಲ್ಡ್ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು ಕಡ್ಡಾಯ.

3. ಪ್ರಥಮ ವರ್ತಮಾನ ವರದಿಯಲ್ಲಿ ನೊಂದವರ ಮೂಲ ಹೆಸರು ದಾಖಲಿಸದೇ ಬದಲಿಸಿದ ಹೆಸರನ್ನು ಅಥವಾ ಅಕ್ಷರಗಳನ್ನು ಸ್ಪಷ್ಟವಾಗಿ ನಮೂದಿಸುವುದು ಮತ್ತು ಹೆಸರು ಬದಲಾಯಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ನಮೂದಿಸುವುದು.

4. ನೊಂದವರ ಬದಲಾಯಿಸಿದ ಹೆಸರಿನಲ್ಲಿಯೇ ಇತರೆ ವ್ಯವಹಾರಗಳನ್ನು ಮಾಡುವುದು.

5. ತನಿಖೆಯಲ್ಲಿ ದಾಖಲು ಮಾಡಿಕೊಳ್ಳುವ ಸಾಕ್ಷಿದಾರರ ಹೇಳಿಕೆಗಳಲ್ಲಿ ನೊಂದವರ ಮೂಲ ಹೆಸರು ಮತ್ತು ಗುರುತಿಸುವಿಕೆಯನ್ನು ದಾಖಲು ಮಾಡಿಕೊಂಡ ನಂತರ ಆ ಹೇಳಿಕೆಗಳನ್ನು ಸೀಲ್ಡ್ ಲಕೋಟೆಯಲ್ಲಿ ಇರಿಸಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರಿನಲ್ಲಿ ಹೇಳಿಕೆಯ ಪ್ರತಿಗಳನ್ನು ನಿತ್ಯದ ತನಿಖೆಗಳಲ್ಲಿ ಬಳಸಿಕೊಳ್ಳುವುದು.

6. ದೋಷಾರೋಪಣಾ ವರದಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಗುರುತು, ವಿಳಾಸವಿರುವ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ಆರೋಪಿಯ ವಿರುದ್ಧ ದೋಷಾರೋಪಣೆಯನ್ನು ರಚಿಸುವುದು ಮತ್ತು ಸದರಿ ದೋಷಾರೋಪಣಾ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದು. ಇದಕ್ಕೆ ಪ್ರತಿಯಾಗಿ ಮತ್ತೊಂದು ದೋಷಾರೋಪಣಾ ವರದಿಯ ಪ್ರತಿಯಲ್ಲಿ ನೊಂದ ಮಹಿಳೆ ಅಥವಾ ಅಪ್ರಾಪ್ತರ ಬದಲಾಯಿತ ಹೆಸರನ್ನು ಬಳಸಿಕೊಂಡು ದೋಷಾರೋಪಣಾ ಪ್ರತಿಯನ್ನು ತಯಾರಿಸುವುದು. ಸದರಿ ದೋಷಾರೋಪಣಾ ವರದಿಯ ಪ್ರತಿಯನ್ನು ಆರೋಪಿ ಮತ್ತು ಅಭಿಯೋಜಕರಿಗೆ ಪೂರೈಸಲು ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಬೇಕು.

BIG NEWS: Police are required to maintain confidentiality of names and addresses of victims in 'POCSO cases'!
Share. Facebook Twitter LinkedIn WhatsApp Email

Related Posts

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM2 Mins Read

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM2 Mins Read

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM2 Mins Read
Recent News

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM

ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ತಬ್ಧ: ‘ರಾಸಾಯನಿಕ ವಾಸನೆ’ಯಿಂದ ಪ್ರಯಾಣಿಕರಲ್ಲಿ ಆತಂಕ

14/03/2026 1:41 PM

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM
State News
KARNATAKA

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

By kannadanewsnow5714/03/2026 1:50 PM KARNATAKA 2 Mins Read

ಮೂಲವ್ಯಾಧಿ (Piles) ಎನ್ನುವುದು ಸಾಮಾನ್ಯವಾದರೂ ಅತ್ಯಂತ ನೋವಿನಿಂದ ಕೂಡಿದ ಆರೋಗ್ಯ ಸಮಸ್ಯೆಯಾಗಿದೆ. ಮಲದ್ವಾರದ ಭಾಗದಲ್ಲಿ ರಕ್ತನಾಳಗಳ ಬಾವು ಮತ್ತು ರಕ್ತಸ್ರಾವ…

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM

ಕೆಎಸ್‌ಆರ್‌ಟಿಸಿ ಅನುಕಂಪದ ಆಧಾರದ ನೇಮಕಾತಿ: ಇನ್ಮುಂದೆ ಮೃತ ನೌಕರರ ಮಗಳು, ಸಹೋದರಿಗೂ ಉದ್ಯೋಗ

14/03/2026 12:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.