ಉಡುಪಿ : ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಇಂದು ಉಡುಪಿಗೆ ಆಗಮಿಸುತ್ತಿದ್ದಾರೆ.
ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ನಿಗದಿಗಿಂತಲೂ 40 ನಿಮಿಷ ಮುಂಚಿತವಾಗಿ ಅಂದರೆ, ಬೆಳಗ್ಗೆ 11.40ರ ಬದಲಿಗೆ 11 ಗಂಟೆಗೇ ಅವರು ಉಡುಪಿ ತಲುಪಲಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳೂ 40 ನಿಮಿಷ ಮುಂಚಿತವಾಗಿ ನಡೆಯಲಿವೆ.
ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಮತ್ತು ಅಲ್ಲಿಂದ ಉಡುಪಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿರುವ ಪ್ರಧಾನಿ, ಉಡುಪಿ ಹೆಲಿಪ್ಯಾಡ್ ನಿಂದ 20 ನಿಮಿಷಗಳ ರೋಡ್ ಶೋ ಮೂಲಕ ಶ್ರೀಕೃಷ್ಣ ಮಠಕ್ಕೆ ತಲುಪಲಿದ್ದಾರೆ. ಅಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ ಮತ್ತು ‘ಸುವರ್ಣ ಕನಕನ ಕಿಂಡಿ’ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀಕೃಷ್ಣನ ದರ್ಶನ ದರ್ಶನ ಮಾಡಲಿದ್ದಾರೆ.
ಉಡುಪಿ ಭೇಟಿ ಬಗ್ಗೆ ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವಿಟ್
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ…
— Narendra Modi (@narendramodi) November 27, 2025
ಸಂಚಾರ ಸಲಹೆಗಳು
ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಗಳು ದಿನಾಂಕ 28/11/2025 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ದಿನಾಂಕ 28/11/2025 ರ ಬೆಳಿಗ್ಗೆ 11:00 ಗಂಟೆಯಿಂದ ಕಾರ್ಯಕ್ರಮದ ಅಂತ್ಯದವರೆಗೆ ಸಂಚಾರ ಮಾರ್ಗ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.
1.ಸನ್ಮಾನ್ಯ ಪ್ರಧಾನ ಮಂತ್ರಿಗಳ ರೋಡ್ ಶೋ ಹಾಗೂ ಕಾರ್ಯಕ್ರಮದ ರಸ್ತೆಯಲ್ಲಿ ಸಂಚಾರ ನಿರ್ಭಂದಿಸಲಾಗಿದೆ.
2.ಮಂಗಳೂರಿನಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಉದ್ಯಾವರ – ಮಲ್ಪೆ – ಕೊಡವೂರು -ಆಶೀರ್ವಾದ್ ಜಂಕ್ಷನ್ ಮಾರ್ಗ ವಾಗಿ ಸಂಚರಿಸುವುದು
3. ಕುಂದಾಪುರದಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಅಂಬಾಗಿಲು – ಪೆರಂಪಳ್ಳಿ – ಮಣಿಪಾಲ-ರಾಂಪುರ – ಅಲೆವೂರು – ಕಟಪಾಡಿ ಮಾರ್ಗವಾಗಿ ಸಂಚರಿಸುವುದು.
4. ಮಲ್ಪೆಯಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ – ಕಲ್ಮಾಡಿ – ಕಿದಿಯೂರು – ಕಡೆಕಾರ್ -ಉದ್ಯಾವರ – ಕಟಪಾಡಿ ಮಾರ್ಗವಾಗಿ ಸಂಚರಿಸುವುದು. ಅಥವಾ ಮಲ್ಪೆ – ಪಡುಕೆರೆ -ಮಟ್ಟು- ಕಾಪು ಮಾರ್ಗವಾಗಿ ಸಂಚರಿಸುವುದು.
5. ಮಲ್ಪೆಯಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ- ಕೊಡವೂರು – ಆಶೀರ್ವಾದ ಜಂಕ್ಷನ್–ರೋಬೊಸಾಫ್ಟ್. ಮಾರ್ಗವಾಗಿ ಅಥವಾ ನೇಜಾರು – ಸಂತೆಕಟ್ಟೆ ಮಾರ್ಗವಾಗಿ ಸಂಚರಿಸುವುದು.
6. ಮಂಗಳೂರು ಕಡೆಯಿಂದ ಘನ ವಾಹನಗಳು ಕಟಪಾಡಿಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
7. ಕುಂದಾಪುರ ಕಡೆಯಿಂದ ಘನ ವಾಹನಗಳು ಸಂತೆಕಟ್ಟೆಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಸಲಹೆಗಳು
1. ಕುಂದಾಪುರ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಅಂಬಾಗಿಲು ಮಾರ್ಗವಾಗಿ ನಿಟ್ಟೂರು ಬಳಿ ಜನರನ್ನು ಇಳಿಸಿ ಸಿಲಾಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು ಅಥವಾ ಜನರನ್ನು ರಸಿಕ ಬಾರ್ ಬಳಿ ಇಳಿಸಿ ಎಂ.ಜಿ.ಎಂ ಬಳಿ ಪಾರ್ಕಿಂಗ್ ಮಾಡುವುದು.
-2. ಕುಂದಾಪುರ ಕಡೆಯಿಂದ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಂಬಾಗಿಲು ಪೆರಂಪಳ್ಳಿ-ದೊಡ್ಡನಗುಡ್ಡೆ ಮಾರ್ಗವಾಗಿ ಎಂ.ಜಿ.ಎಂ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
3.ಹೆಬ್ರಿ, ಹಿರಿಯಡಕ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಎಡಕ್ಕೆ ತಿರುಗಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
4. ಕಾರ್ಕಳ ಮೂಡುಬೆಳ್ಳೆ ಮಾರ್ಗವಾಗಿ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಲೆವೂರು – ಕುಕ್ಕಿಕಟ್ಟೆ ಮಾರ್ಗವಾಗಿ ಬೀಡನಗುಡ್ಡೆ ಪ್ರದರ್ಶನ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ಮಾಡುವುದು.
5. ಕಾರ್ಕಳ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಜನರನ್ನು ಇಳಸಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
5.ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು, ಕಟಪಾಡಿ ಬೈಲೂರು ಮುದ್ದಣ್ಣ ಎಸ್ಟೇಟ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಉದ್ಯಾವರ ಮಾರ್ಗವಾಗಿ-
6. ಮಲ್ಪೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಅಂಬಲಪಾಡಿ ಮಾರ್ಗವಾಗಿ ಶಾಮಿಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.








