ಬೆಂಗಳೂರು: 7 ನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ, ಸೌಲಭ್ಯಗಳು ಯಥಾವತ್ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ಹಾಲು ಮಹಾಮಂಡಳ(KMF)ದ ಚಟುವಟಿಕೆ ಗಳು ಫೆ.1ರಿಂದ ಸ್ಥಗಿತವಾಗುವ ಸಾಧ್ಯತೆಗಳಿವೆ.
ಏಳನೇ ವೇತನ ಆಯೋಗ ವರದಿಯಂತೆ ವೇತನ ನೀಡುವಂತೆ ನೌಕರರು ಕಂಪನಿಗೆ ಆಗ್ರಹಿಸಿದ್ದಾರೆ. ಆದ್ರೆ ಸದ್ಯ ಆರ್ಥಿಕ ಹೊರೆ ಕಾರಣ ವೇತನ ಪರಿಷ್ಕರಣೆಗೆ ಕೆಎಂಎಫ್ ಆಡಳಿತ ಮಂಡಳಿ ಹಿಂದೇಟು ಹಾಕಿದೆ. ಇದರಿಂದ ನೌಕರರು, ಅಧಿಕಾರಿಗಳ ಮನವಿಗೆ ಆಡಳಿತ ಮಂಡಳಿ ಸ್ಪಂದನೆಯೇ ನೀಡಿಲ್ಲ. ಹೀಗಾಗಿ ಫೆ.1 ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ನಿರ್ಧರಿಸಿದೆ.
ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಧಿಕಾರಿ- ನೌಕರರು ಫೆಬ್ರವರಿ 1 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಕೆಎಮ್‌ಎಫ್ ಬ್ರಾಂಡ್‌ನ ನಂದಿನಿ ಹಾಲು, ಮೊಸರು ಫೆಬ್ರವರಿ 1 ರಂದು ಸಿಗೋದು ಅನುಮಾನ ಎನ್ನಲಾಗಿದೆ.