ಬೆಂಗಳೂರು : ಆ್ಯಪ್ ನಲ್ಲಿ ಷೇರು ಮಾರುಕಟ್ಟೆಗೆ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ ನಾಲ್ವರು ಸೈಬರ್ ಕಳ್ಳರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.
ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕರಿಗೆ ಬಲೆಬೀಸಿ ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಸಿಗಲಿದೆ ಎಂದು ಜಾಹೀರಾತು ನೀಡಿ ಲಿಂಕ್ ಮೇಲೆ ಕ್ಲಿಕ್ ಮಾಡುವವರ ಮೊಬೈಲ್ ನಂಬರ್ ಅನ್ನು ಟೆಲಿಗ್ರಾಂ ಅಥವಾ ವಾಟ್ಸಪ್ ಗ್ರೂಪ್ ಸದಸ್ಯರಾಗಿ ಮಾಡಿಕೊಳ್ಳುತ್ತಿದ್ದರು. ಬಳಿಕ ಆ್ಯಪ್ ಡೌನ್ಲೋಡ್ ಮಾಡಿಸಿ ಹೂಡಿಕೆ ಮಾಡುವಂತೆ ಕೋಟ್ಯಾಂತರ ರೂಪಾಯಿಗಳನ್ನು ಸೈಬರ್ ಕಳ್ಳರು ದೂಚಿದ್ದಾರೆ.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಬೆಂಗಳೂರಿನ ಎಂ.ಶಶಿಕುಮಾರ್ (25), ಎಂ.ಸಚಿನ್ (26), ಎಸ್.ಕೆ. ಕಿರಣ್ (25) ಹಾಗೂ ಚರಣ್ ರಾಜ್ (26) ಬಂಧಿತ ಆರೋಪಿಗಳು. 25 ಕೋಟಿ ರೂ. ಮೌಲ್ಯದ ನಗದು, ಮೊಬೈಲ್, ಡಿಜಿಟಲ್ ಸಾಕ್ಷ್ಯ, ಸೇರಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಸೋಮವಾರ ವಿಶೇಷ ಕೋರ್ಟ್ ಗೆ ಹಾಜರುಪಡಿಸಿ 7 ದಿನಗಳ ಕಸ್ಟಡಿಗೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.