ಬೆಂಗಳೂರು : ಖಜಾನೆ-2ರ ತಂತ್ರಾಂಶದ ಮುಖಾಂತರ ಮಹಾಲೇಖಪಾಲರಿಗೆ ವಯೋ ನಿವೃತ್ತಿ/ಸ್ವ- ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖಿತ ಸರ್ಕಾರದ ಆದೇಶದಲ್ಲಿ, ಖಜಾನೆ-2ರ ತಂತ್ರಾಂಶದ ಮುಖಾಂತರ ಪ್ರಾಯೋಗಿಕವಾಗಿ, ಏಪ್ರಿಲ್ 2025 ರಿಂದ ಮೂರು ತಿಂಗಳ ಕಾಲ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು (ಡಿಡಿಓ), ವಯೋನಿವೃತ್ತಿ /ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಆನ್ಲೈನ್ ನಲ್ಲಿ ದಾಖಲಿಸಿ ಮಂಜೂರು ಮಾಡುವುದು ಮತ್ತು ಭೌತಿಕವಾಗಿ ಸಿದ್ಧಪಡಿಸಿರುವ ಅರ್ಜಿ ಹಾಗೂ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮಹಾಲೇಖಪಾಲರಿಗೆ ನಿಯಮಾನುಸಾರ ಸಲ್ಲಿಸಲು ಆದೇಶಿಸಿದೆ. ಪ್ರಾಯೋಗಿಕ ಹಂತವು ಯಶಸ್ವಿಯಾದಲ್ಲಿ, ಖಜಾನೆ-2ರ ತಂತ್ರಾಂಶದ ಮುಖಾಂತರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಮುಂದುವರೆಸುವುದು ಎಂದು ಸಹ ಆದೇಶಿಸಿದೆ.
2. ಆದಾಗ್ಯೂ, ಸರ್ಕಾರ ನೀಡಿದ ಸ್ಪಷ್ಟ ಸೂಚನೆಗಳ ಹೊರತಾಗಿಯೂ, ಗಮನಾರ್ಹ ಸಂಖ್ಯೆಯ ಡಿಡಿಓಗಳು ಪಿಂಚಣಿ ದಾಖಲೆಗಳನ್ನು ಭೌತಿಕವಾಗಿ ಸಲ್ಲಿಸುವುದನ್ನು ಮುಂದುವರೆಸಿರುವುದನ್ನು ಗಮನಿಸಲಾಗಿದೆ. ಇದು ಪ್ರಕ್ರಿಯೆಯನ್ನು ವಿಳಂಬಗೊಳಿಸುವುದಲ್ಲದೆ, ePPO ಯೋಜನೆಯಡಿಯಲ್ಲಿ ಪಾವತಿಗಾಗಿ ಸಕಾಲಿಕ ಪಿಂಚಣಿ ದೃಢೀಕರಣ ಮತ್ತು ಎಲೆಕ್ಟ್ರಾನಿಕ್ ದತ್ತಾಂಶ ಪ್ರಸರಣಕ್ಕಾಗಿ ಮಹಾಲೇಖಪಾಲರ ಕಚೇರಿ ಮತ್ತು ಖಜಾನೆಯ ನಡುವಿನ ತಡರಹಿತ ಸಂಯೋಜನೆಗೆ ಅಡ್ಡಿಪಡಿಸುತ್ತದೆ ಎಂದು ಮಹಾಲೇಖಪಾಲರು ಉಲ್ಲೇಖಿತ ಪತ್ರದಲ್ಲಿ ತಿಳಿಸಿ, ಡಿಜಿಟಲ್ ಪರಿಸರ ವ್ಯವಸ್ಥೆಗೆ ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಳವಡಿಸುವ ಸಲುವಾಗಿ ಈ ಕೆಳಗಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿರುತ್ತಾರೆ.
1) ದಿನಾಂಕ:01.12.2025 ರಿಂದ ಜಾರಿಗೆ ಬರುವಂತೆ. ವಯೋ ನಿವೃತ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ. ಮಹಾಲೇಖಪಾಲರ ಕಚೇರಿಯಲ್ಲಿ ಭೌತಿಕವಾಗಿ ಸಲ್ಲಿಸಿದ ಯಾವುದೇ ಪಿಂಚಣಿ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ii) ಮೇಲೆ ಉಲ್ಲೇಖಿಸಲಾದ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ನು ಅನುಸರಿಸದೇ ಸೇವಾ ವಹಿಯೊಂದಿಗೆ ಭೌತಿಕ ರೂಪದಲ್ಲಿ ಸಲ್ಲಿಸಲಾಗುವ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ.
II) ಮಹಾಲೇಖಪಾಲರ ಕಚೇರಿಯಲ್ಲಿ ಭೌತಿಕ ಸೇವಾವಹಿ ಮತ್ತು ನಮೂನೆ-7 ರ ಮುದ್ರಿತ ಪ್ರತಿಯೊಂದಿಗೆ ನಿಗದಿತ ಆನ್ಲೈನ್ ಪ್ರಕ್ರಿಯೆಯ ಮೂಲಕ ಸಲ್ಲಿಸಲಾಗುವ ಪಿಂಚಣಿ ಪ್ರಸ್ತಾವನೆಗಳನ್ನು ಮಾತ್ರ ಸ್ವೀಕರಿಸಲಾಗುವುದು.
v) ನಮೂನೆ-7 ರ ಮುದ್ರಿತ ಪ್ರತಿ ಮತ್ತು ಭೌತಿಕ ಸೇವಾವಹಿಯನ್ನು ಆನ್ಲೈನ್ನಲ್ಲಿ ಸಲ್ಲಿಸಿದ ನಂತರವೇ ಪಿಂಚಣಿ ಪ್ರಸ್ತಾವನೆಯನ್ನು ಪರಿಶೀಲಿಸುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಹಾಗೂ ಸದರಿ ಈ ಪ್ರಕ್ರಿಯೆಯನ್ನು ಸದರಿ ದಿನಾಂಕದಿಂದಲೇ ಪರಿಗಣಿಸಲಾಗುವುದು.
v) ಎಲ್ಲಾ ನಿವೃತ್ತ/ನಿವೃತ್ತಿ ಹೊಂದಿದ ನೌಕರರುಗಳಿಗೆ ನೇಮಕಾತಿ ದಿನಾಂಕದಿಂದ ತಿಂಗಳ ಕೊನೆಯ ಕೆಲಸದ ದಿನಾಂಕ ಅವಧಿಯನ್ನು ಒಳಗೊಂಡಂತೆ ವೇತನ ನಿಗದಿಯನ್ನು ಆಯಾ ಡಿಡಿಓಗಳು ಕಡ್ಡಾಯವಾಗಿ ಮಾಡಿರಬೇಕು ಮತ್ತು ಸರಿಯಾದ ಅಂತಿಮ ವೇತನವನ್ನು ಸೆಳೆದಿರಬೇಕು. ಈ ವಿವರಗಳನ್ನು, ಸರಿಯಾಗಿ ಭರ್ತಿ ಮಾಡಿದ ನಮೂನೆ-7 ರ ಜೊತೆಗೆ, ಕಡ್ಡಾಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
vi) ಈ ಅನುಷ್ಠಾನವು. ವಯೋನಿವೃತ್ತಿ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿದೆ ಮತ್ತು ಕಾಲಾನಂತರದಲ್ಲಿ ಇತರ ವರ್ಗದ ಪಿಂಚಣಿ ಪ್ರಕರಣಗಳಿಗೆ ವಿಸ್ತರಿಸಲಾಗುವುದು.
3. ಮೇಲ್ಕಂಡಂತೆ, ಮಹಾಲೇಖಪಾಲರು ನೀಡಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಆದೇಶದಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ರಾಜ್ಯದ ಎಲ್ಲಾ ಡಿಡಿಓ/ಪಿಂಚಣಿ ಮಂಜೂರಾತಿ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ. ಸೂಚನೆಗಳ ಯಾವುದೇ ಉಲ್ಲಂಘನೆಯಿಂದಾಗಿ ನಿವೃತ್ತಿ ವೇತನದ ಪ್ರಾಧಿಕರಣವು ವಿಳಂಬವಾದಲ್ಲಿ, ಸದರಿ ವಿಳಂಬಕ್ಕೆ ಸಂಬಂಧಿಸಿದ ಡಿಡಿಓ/ಪಿಂಚಣಿ ಮಂಜುರಾತಿ ಪ್ರಾಧಿಕಾರಿಗಳನ್ನು ಹೊಣೆಗಾರರೆಂದು ಪರಿಗಣಿಸಲಾಗುವುದು.









