ದಾವಣಗೆರೆ : ಅಪ್ರಾಪ್ತ ಪುತ್ರನಿಗೆ ಬೈಕ್ ನೀಡಿದ್ದ ತಂದೆಗೆ ದಾವಣಗೆರೆ ಸಂಚಾರಿ ಪೊಲೀಸರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದ ಉತ್ತಮ್ ಚಂದ್ ಬಡಾವಣೆ ನಿವಾಸಿಗೆ ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಬರೋಬ್ಬರಿ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದ ಎಆರ್ ಜಿ ಕಾಲೇಜ್ ಬಳಿ ಮಗ ಬೈಕ್ ಚಾಲನೆ ಮಾಡಿದ್ದಾನೆ. ತಪಾಸಣೆ ವೆಳೆ ಅಪ್ರಾಪ್ತನಿಗೆ ಬೈಕ್ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಅಪ್ರಾಪ್ತ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ್ದು, ಪುನರಾವರ್ತೆಯಾದ್ರೆ ಎಫ್ ಐಆರ್ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.