ಇಸ್ಲಾಮಾಬಾದ್ : ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಗಂಟೆಗಳ ನಂತರ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಅವರು ಪಾಕಿಸ್ತಾನ ಸೇನೆ, ಚೀನಾ, ಟರ್ಕಿ ಮತ್ತು ಮುಸ್ಲಿಂ ಸಹೋದರತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಷರೀಫ್ ಅವರು ಪಾಕಿಸ್ತಾನ, ಚೀನಾ ಮತ್ತು ಟರ್ಕಿಯ ಸೈನ್ಯಕ್ಕೂ ಧನ್ಯವಾದ ಅರ್ಪಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಹಿಂದಿನ ದಿನ ಹೇಳಿಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಷರೀಫ್ ಶ್ಲಾಘಿಸಿದರು.
ಭಾರತದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಬಗ್ಗೆ ಮಾತನಾಡಿದ ಷರೀಫ್, “ನಮ್ಮ ದಾಳಿಯು ಶತ್ರುಗಳ ವಾಯುನೆಲೆಗಳು ಮತ್ತು ಮದ್ದುಗುಂಡುಗಳನ್ನು ನಾಶಪಡಿಸಿತು. ಅವರ ರಫೇಲ್ ಅನ್ನು ನಾವು ಹೊಡೆದುರುಳಿಸಿದೆವು. ನಾವು ಗೆದ್ದಿದ್ದೇವೆ ಮತ್ತು ಇದು ಪಾಕಿಸ್ತಾನಿಗಳ ಗೆಲುವು” ಎಂದು ಹೇಳಿದರು.
ಕಳೆದ ಕೆಲವು ದಿನಗಳಲ್ಲಿ “ಮಸೀದಿಗಳು ನಾಶವಾಗಿವೆ” ಎಂದು ಅವರು ಹೇಳಿಕೊಂಡಿದ್ದಾರೆ ಭಾರತ ಈ ಹೇಳಿಕೆಯನ್ನು ತಿರಸ್ಕರಿಸಿದೆ. ಕದನ ವಿರಾಮ ಒಪ್ಪಂದವನ್ನು “ಎಲ್ಲರ ಹಿತಕ್ಕಾಗಿ” ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಚೀನಾ ಮತ್ತು ಅದರ ಜನರಿಗೆ ವಿಶೇಷ ಉಲ್ಲೇಖವನ್ನು ನೀಡುತ್ತಾ, “ನಾನು ಅವರನ್ನು ನನ್ನ ಹೃದಯದಿಂದ ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಹೇಳಿದರು.
Pakistan puppet PM Shehbaz Sharif declares victory in fight against India, says
"Our Attack destroyed Enemy's Air Bases, & Ammunition. Their Rafale were shot down by us. We have Won" pic.twitter.com/EXzWVwRtqR
— Megh Updates 🚨™ (@MeghUpdates) May 10, 2025
VIDEO | Foreign Secretary Vikram Misri (@VikramMisri) on India-Pakistan Border Violations:
“We call upon Pakistan to take appropriate steps to address these violations and handle the situation with seriousness and responsibility. The Armed Forces are maintaining a strong vigil… pic.twitter.com/rMaHV9x2hI
— Press Trust of India (@PTI_News) May 10, 2025
“We have won… this is victory”
Watch this 6 min nonsense from Pakistan's PM Shehbaz Sharif. Extremely boring.
— Lord Immy Kant (Eastern Exile) (@KantInEast) May 10, 2025