ನವದೆಹಲಿ : ಕೇಂದ್ರವು ಮಂಗಳವಾರ ಮಧ್ಯಾಹ್ನ ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ (ONOP) ಮಸೂದೆಯನ್ನು ಪರಿಚಯಿಸಲಿದೆ. ಮಸೂದೆಯನ್ನು ಪರಿಚಯಿಸುವ ಮೊದಲು ಬಿಜೆಪಿ ಲೋಕಸಭೆಯಲ್ಲಿ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ನೀಡಿದೆ.
ಮೇಘವಾಲ್ ಅವರು ಮಂಗಳವಾರ ಸಂಸತ್ತಿನ ಕೆಳಮನೆಯಲ್ಲಿ ಮಂಡಿಸಲಿರುವ ಎರಡು ಮಸೂದೆಗಳನ್ನು ಕೇಂದ್ರವು ಸೋಮವಾರ ಪಟ್ಟಿ ಮಾಡಿದೆ – ಸಂವಿಧಾನ (ನೂರ ಇಪ್ಪತ್ತೊಂಬತ್ತು ತಿದ್ದುಪಡಿ) ಮಸೂದೆ, 2024 ಎಂದೂ ಕರೆಯಲ್ಪಡುವ ಒಎನ್ಒಪಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ.
ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನ ಏಕಕಾಲದಲ್ಲಿ ನಡೆಸುವ ಪರಿಕಲ್ಪನೆಯನ್ನ ಹೊರತರುವ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿತು. ಈ ಮಸೂದೆಯನ್ನ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸುವ ನಿರೀಕ್ಷೆಯಿದೆ.
ಮಸೂದೆಯನ್ನ ಮಂಡಿಸಿದ ನಂತ್ರ ಮಸೂದೆಯನ್ನ ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸುವಂತೆ ಮೇಘವಾಲ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನ ವಿನಂತಿಸುವ ನಿರೀಕ್ಷೆಯಿದೆ. ವಿವಿಧ ಪಕ್ಷಗಳ ಸಂಸದರ ಬಲದ ಆಧಾರದ ಮೇಲೆ ಜಂಟಿ ಸಮಿತಿಯನ್ನ ರಚಿಸಲಾಗುವುದು.