ಬೆಂಗಳೂರು: ರಾಜ್ಯದಲ್ಲಿ ಕೆಮ್ಮಿನ ಸಿರಪ್ ಔಷಧಗಳ 390 ಸ್ಯಾಂಪಲ್ ತಪಾಸಣೆ ಮಾಡಲಾಗುತ್ತಿದೆ. ಈವರೆಗೆ ವರದಿಯಲ್ಲಿ ಯಾವುದೇ ನೆಗೆಟಿವ್ ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಧ್ಯಪ್ರದೇಶ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ, ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದುವರೆಗೂ 390ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಸ್ಯಾಂಪಲ್ ತಪಾಸಣೆ ನಡೆಸಿದ್ದು, ಅವುಗಳಲ್ಲಿ ಯಾವುದೇ ರೀತಿಯಾದ ನೆಗೆಟಿವ್ ಅಂಶ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೆಮ್ಮಿನ ಸಿರಪ್ ನ 390 ಸ್ಯಾಂಪಲ್ ತಪಾಸಣೆ ಮಾಡಿಸುತ್ತಿದ್ದೇವೆ. ವರದಿಯ ಯಾವುದರಲ್ಲೂ ನೆಗೆಟಿವ್ ಬಂದಿಲ್ಲ. ಎಲ್ಲಾ ಡ್ರಗ್ ಮ್ಯಾನಿಫ್ಯಾಕ್ಟರ್ಗಳ ಮಾನದಂಡವನ್ನು ಮತ್ತೊಮ್ಮೆ ಪರಿಶೀಲನೆ ಮಾಡಗುತ್ತಿದೆ. ನಿಯಮ ಪ್ರಕಾರ ಔಷಧ ತಯಾರು ಮಾಡಬೇಕು. ಅದನ್ನೆಲ್ಲಾ ಪರಿಶೀಲನೆ ಮಾಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.