ಬೆಂಗಳೂರು : ಜನವರಿ 23 ರ ನಾಳೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಾಳೆ ‘ರಾಷ್ಟ್ರೀಯ ಮತದಾರರ ದಿನ’ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಸರ್ಕಾರಿ ಅಧೀನ ಕಛೇರಿಗಳಲ್ಲಿ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಹಾಗೂ ಇದರೊಂದಿಗೆ ಲಗತ್ತಿಸಿರುವ “ರಾಷ್ಟ್ರೀಯ ಮತದಾರರ ದಿನಾಚರಣೆ” ಯ Logo ವನ್ನು ಅಧಿಕೃತ ಸ್ಟೇಷನರಿ, ಸರಕು, ವೆಬ್‌ಸೈಟ್‌ಗಳಲ್ಲಿ ಸೂಕ್ತವಾಗಿ ಉಪಯೋಗಿಸುವಂತೆ ಹಾಗೂ #NVD2026 ಹ್ಯಾಶ್‌ಟ್ಯಾಗ್ ಉಪಯೋಗಿಸಿ ಈ ದಿನಾಚರಣೆಗೆ ಸಂಬಂಧಿಸಿದಂತೆ ನಡೆಸುವ ಚಟುವಟಿಕೆಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡುವಂತೆ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆಗಳನ್ನು ತಪ್ಪದೇ ನೀಡುವಂತೆ ಸೂಚಿಸಲಾಗಿದೆ.
ಪ್ರತಿ ವರ್ಷವೂ ಜನವರಿ 25 ನೇ ತಾರೀಖಿನಂದು “ರಾಷ್ಟ್ರೀಯ ಮತದಾರರ ದಿನಾಚರಣೆ” ಯ ಪ್ರತಿಜ್ಞಾ ಬೋಧನಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆದರೆ ಈ ಬಾರಿ ಜನವರಿ 25 ನೇ ತಾರೀಖಿನಂದು ಸಾರ್ವತ್ರಿಕ ರಜಾ ದಿನವಾದ್ದರಿಂದ, ಈ ವರ್ಷ ಜನವರಿ 23, 2026 ರ ಶುಕ್ರವಾರದಂದು ” ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸುವಂತೆ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ, ಸದರಿ ದಿನದಂದು, ತಮ್ಮ ಅಧೀನ ಕಛೇರಿಗಳಲ್ಲಿಯೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಹಾಗೂ ಇದರೊಂದಿಗೆ ಲಗತ್ತಿಸಿರುವ “ರಾಷ್ಟ್ರೀಯ ಮತದಾರರ ದಿನಾಚರಣೆ” ಯ Logo ವನ್ನು ಅಧಿಕೃತ ಸ್ಟೇಷನರಿ, ಸರಕು, ವೆಬ್‌ಸೈಟ್‌ಗಳಲ್ಲಿ ಸೂಕ್ತವಾಗಿ ಉಪಯೋಗಿಸುವಂತೆ ಹಾಗೂ #NVD2026 ಹ್ಯಾಶ್‌ಟ್ಯಾಗ್ ಉಪಯೋಗಿಸಿ ಈ ದಿನಾಚರಣೆಗೆ ಸಂಬಂಧಿಸಿದಂತೆ ನಡೆಸುವ ಚಟುವಟಿಕೆಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡುವಂತೆ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆಗಳನ್ನು ತಪ್ಪದೇ ನೀಡುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ. “ರಾಷ್ಟ್ರೀಯ ಮತದಾರರ ದಿನಾಚರಣೆ” ಯ ಪ್ರತಿಜ್ಞಾವಿಧಿಯ ಕನ್ನಡ ಅವತರಣಿಕೆಯ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ.








