ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳ್ಳಬೇಕಿರುವ ಚಟುವಟಿಕೆಗಳು ಮತ್ತು ಮೇಲ್ವಿಚಾರಣೆಯ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದ ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳ ನಲಿಕಲಿ ಘಟಕಗಳಲ್ಲಿ ವಿದ್ಯಾ ಪ್ರವೇಶ ಮತ್ತು ಸೇತುಬಂಧ ಕಾಯಕ್ರಮದ ಜೊತೆಗೆ ಆರಂಭಿಕ ಕಲಿಕೆಯನ್ನು ಕೈಗೊಳ್ಳುವ ಮೂಲಕ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿನ ಕಲಿಕಾಂಶಗಳನ್ನು ತರಗತಿ ನಿರ್ವಹಣೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದ ಅನುಷ್ಟಾನ ಮತ್ತು ಅನುಪಾಲನೆಗೆ ಅಗತ್ಯ ಕ್ರಮಗಳನ್ನು ಸೂಚಿಸಲಾಗಿದ್ದು, ಎಲ್ಲಾ ಹಂತದ ಮೇಲುಸ್ತುವಾರಿ ಅಧಿಕಾರಿಗಳು ಮತ್ತು ಬ್ಲಾಕ್ ಹಾಗೂ ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿಗಳು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ನಿರ್ದೇಶಿಸಿದೆ.
ಅ) ವಿದ್ಯಾಪ್ರವೇಶ/ಶಾಲಾ ಸಿದ್ದತಾ ಕಾರ್ಯಕ್ರಮ:
1. ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ 01ನೇ ತರಗತಿಯ ಮಕ್ಕಳಿಗೆ ಜೂನ್ 02 ರಿಂದ ಜುಲೈ 18ರವರೆಗೆ ಒಟ್ಟು 4 0 ದಿನಗಳ ವಿದ್ಯಾಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸುವುದಲ್ಲದೆ, ನಲಿಕಲಿ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ‘ವಿ.ಪ’ ಎಂಬ ಶೀರ್ಷಿಕೆಯಲ್ಲಿ ಸೇರ್ಪಡೆಗೊಳಿಸಲಾಗಿರುವ ಚಟುವಟಿಕೆಗಳನ್ನು ಮತ್ತು 40 ದಿನಗಳ ವೇಳಾಪಟ್ಟಿಯಲ್ಲಿ ಸೂಚಿಸಲಾಗಿರುವ ಅವಧಿವಾರು ಚಟುವಟಿಕೆಗಳನ್ನು ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಕಾರ್ಯಕ್ರಮದ ಅಂತ್ಯಕ್ಕೆ ವಿದ್ಯಾರ್ಥಿವಾರು ಮೌಲ್ಯಮಾಪನ ಕೈಗೊಳ್ಳುವ ಮೂಲಕ, ಪೂರಕ ದಾಖಲೆಯನ್ನು ಕೃತಿ ಸಂಪುಟದಲ್ಲಿ ವ್ಯವಸ್ಥಿತವಾಗಿ ನಿರ್ವಹಿಸುವುದು.
ಆ) ಸೇತುಬಂಧ ಕಾರ್ಯಕ್ರಮ:
2. ನಲಿಕಲಿ ಘಟಕಗಳಲ್ಲಿ 02 ಮತ್ತು 03ನೇ ತರಗತಿಯ ಮಕ್ಕಳಿಗೆ ಜೂನ್-02ರಿಂದ ಜೂನ್-30ರವರೆಗೆ ‘ಸೇತುಬಂಧ’ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವುದು. ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ‘ಸೇ.ಬಂ’ ಎಂಬ ಶೀರ್ಷಿಕೆಯಡಿಯಲ್ಲಿ ನೀಡಿರುವ ಚಟುವಟಿಕೆಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವುದು.
3. ENK w ư 8.20 Listening & Speaking (L&S) ಶೇ.80ರಷ್ಟು Reading & Writing (R&W) ಮೇಲೆ ಕೇಂದ್ರಿಕೃತವಾಗಿದ್ದು ಅದರಂತೆ ಕ್ರಮವಹಿಸುವುದು. ENK ಸೇತುಬಂಧ ಚಟುವಟಿಕೆಗಳಿಗೆ ಸುತ್ತೋಲೆಯ ಅನುಬಂಧವನ್ನು ಗಮನಿಸುವುದು.
4. ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಅಗತ್ಯವಾಗಿ ಕಲಿಯಬೇಕಿರುವ FLN ಕಲಿಕೆಯ ಫಲಗಳನ್ನು ಗಮನದಲ್ಲಿರಿಸಿ, ಸೇತುಬಂಧದ ಚಟುವಟಿಕೆಗಳ ಹಾಳೆಗಳನ್ನು ಅಭ್ಯಾಸ ಸಹಿತ ಪಠ್ಯಪುಸ್ತಕದಲ್ಲಿಯೇ ಸೇರ್ಪಡೆಗೊಳಿಸಲಾಗಿದೆ. ಪ್ರತೀ ವಿದ್ಯಾರ್ಥಿಯ ಕಲಿಕೆಗೂ ಪ್ರಗತಿ ನೋಟದಲ್ಲಿ ಅವಕಾಶ ಕಲ್ಪಿಸಿರುವ ಕಾರಣ, ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳ ಅಗತ್ಯತೆ ಇರುವುದಿಲ್ಲ. ಆದರೆ, ಮಕ್ಕಳು ಬಳಸಿರುವ ಪ್ರತೀ ಚಟುವಟಿಕೆ ಹಾಳೆಗಳ ಕಲಿಕೆಗೂ ಶಿಕ್ಷಕರ ಹಿಮ್ಮಾಹಿತಿ ಮತ್ತು ದೃಢೀಕರಣ ಕಡ್ಡಾಯವಾಗಿರುತ್ತದೆ.
ಇ) ನಲಿಕಲಿ ತರಗತಿ ನಿರ್ವಹಣೆ/ ಕಲಿಕಾ ಪ್ರಕ್ರಿಯೆ:
5. ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ತರಗತಿಗಳಲ್ಲಿ ಪ್ರಥಮ ಭಾಷೆ ಕನ್ನಡ ಮತ್ತು ಭಾಷೆ ಕನ್ನಡ ಉರ್ದು ಹಾಗೂ ದ್ವಿತೀಯ ಭಾಷೆ ಇಂಗ್ಲಿಷ್ ವಿಷಯಗಳಿದ್ದು, ಕೋರ್ ವಿಷಯಗಳಲ್ಲಿ ಗಣಿತ, ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನ ವಿಷಯಗಳಿರುತ್ತವೆ. ಕಲಿಕಾ ಪ್ರಕ್ರಿಯೆಯ ಪ್ರತೀ ಅವಧಿಗೂ 80 ನಿಮಿಷಗಳನ್ನು ನಿಗದಿಪಡಿಸಿದೆ.
6. ತರಗತಿ ಕಲಿಕಾ ಪ್ರಕ್ರಿಯೆಯನ್ನು ಸಾಮೂಹಿಕ ಗುಂಪಿನ ಜೊತೆಗೆ 1.ಕಲಿಕಾಂಶದ ಗುಂಪು, 2. ಅಭ್ಯಾಸ / ಪುನರ್ಬಲನ ಗುಂಪು ಮತ್ತು 3. ಸ್ವ ಮೌಲ್ಯಮಾಪನದ ಗುಂಪುಗಳಿಗೆ ಅವಕಾಶ ಕಲ್ಪಿಸಿದೆ. ಹೊಸ ಮಾದರಿಯ ಕಲಿಕಾ ಸಾಮಗ್ರಿಗಳನ್ನು, ವಾಚಕಗಳನ್ನು ಸದರಿ ಗುಂಪುಗಳಿಗೆ ಸೂಕ್ತವಾಗುವಂತೆ ಸಮನ್ವಯಗೊಳಿಸಲಾಗಿದ್ದು, ಅದರಂತೆ ತರಗತಿ ಪ್ರಕ್ರಿಯೆಯನ್ನು ನಿರ್ವಹಿಸುವುದು.
7. ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿನ ಅಭ್ಯಾಸ/ಬಳಕೆಯ ಚಟುವಟಿಕೆಗಳನ್ನು 02ನೇ ಗುಂಪಿನಲ್ಲಿಯೂ, ಸ್ವ ಮೌಲ್ಯಮಾಪನ ಹಾಗೂ ಪುನರ್ಬಲನ ಚಟುವಟಿಕೆಗಳನ್ನು 03ನೇ ಗುಂಪಿನಲ್ಲಿಯೂ ನಿರ್ವಹಿಸುವುದು.
8. ಶಿ. ಸಂ. ಸಹಾಯ ಅಥವಾ 01ನೇ ಗುಂಪಿನಲ್ಲಿ ಅವಧಿವಾರು ಯಾವ ತರಗತಿಗೆ ಯಾವ ವಿಷಯಗಳ ಪರಿಕಲ್ಪನೆ/ಕಲಿಕಾಂಶಗಳನ್ನು ದಿನದ ಕಲಿಕಾ ಪ್ರಕ್ರಿಯೆಯಲ್ಲಿ ನಿರ್ವಹಿಸಬೇಕಿದೆ ಮತ್ತು ಗುಂಪಿನಲ್ಲಿ ಹಂಚಿಕೆಯಾಗಿರುವ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬುದನ್ನು ಆಧರಿಸಿ ಶಿಕ್ಷಕರು ದಿನಚರಿ/ಡೈರಿಯನ್ನು ಬರೆಯುವುದು ಅತ್ಯಗತ್ಯವಾಗಿದೆ. ನಲಿಕಲಿ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಕಲಿಕೆಯ ಫಲಗಳನ್ನು ಮಾಹೆವಾರು ವಿಂಗಡಿಸಿದ್ದು, ಶಿಕ್ಷಕರು/ಸುಗಮಕಾರರು ಇದಕ್ಕೆ ಸಂಬಂಧಿಸಿದಂತೆ ಪೂರಕ ಚಟುವಟಿಕೆಗಳನ್ನು ರೂಪಿಸಿಕೊಳ್ಳಲು ತಯಾರಿ ನಡೆಸುವುದು.
ಈ) ಇಂಗ್ಲಿಷ್ ನಲಿಕಲಿ (ENK) ತರಗತಿ ನಿರ್ವಹಣೆ / ಕಲಿಕಾ ಪ್ರಕ್ರಿಯೆ:
9. ದ್ವಿತೀಯ ಭಾಷೆ ಇಂಗ್ಲಿಷ್ ವಿಷಯದಲ್ಲಿ ವಿದ್ಯಾ ಪ್ರವೇಶ ಕಾರ್ಯಕ್ರಮದ ನಂತರ ಇ.ಎನ್.ಕೆ ಲೆವೆಲ್-01ರ ಹಾಗೂ ಸೇತುಬಂಧದ ನಂತರ ಲೆವೆಲ್- 02 ಮತ್ತು ಲೆವೆಲ್-03ರ ಕಲಿಕಾ ಏಣಿಯ (Ladder) ಅನುಷ್ಠಾನಕ್ಕೆ ಕ್ರಮವಹಿಸುವುದು.
10. Sight words ಅಭ್ಯಾಸಗಳ ಜೊತೆಗೆ ಕ್ರಿಯಾತ್ಮಕ ವ್ಯಾಕರಣ ಮತ್ತು ಶಬ್ದಕೋಶವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾಷಾ ಆಟಗಳು-ಸಂಭಾಷಣೆಯ ವೃತ್ತ (Language Games & Conversation Circles) ಗಳನ್ನು L&S ನ ಭಾಗವಾಗಿ ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ.
11. ‘I spy’ and ‘Passing the Parcel’, fire in the mountain’, ‘siman Says’, ನಂತಹ ಆಟಗಳನ್ನು ಈ ಹಂತದಲ್ಲಿ ಬಳಸಬಹುದಾಗಿದೆ.
12. Conversation Circles a ‘Possessive pronouns, tenses, singular and plural, use of apostrophe, use of we, they, their and our’ ನಂತಹ ಮಕ್ಕಳು ಮೌಖಿಕವಾಗಿ ಉತ್ತರಿಸಲು ಹಾಗೂ ಈ ಬಗ್ಗೆ ಹೆಚ್ಚು ಅಭ್ಯಾಸ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿದೆ.
13. ENK 3 2 1. R&W 30 ನಿಮಿಷದಿಂದ ಪ್ರಾರಂಭಿಸಿ 2. L&S 20 ನಿಮಿಷದಿಂದ ಅನುಸರಿಸಿ 3. 30 ನಿಮಿಷ R&W ಅನುಸರಿಸಿ.
14. ಬರವಣಿಗೆಯ ಅಭ್ಯಾಸ ಮತ್ತು ನಿಯೋಜಿತ ಕಾರ್ಯಗಳಿಗೆ ಮಕ್ಕಳು 04 ಗೆರೆಗಳ ನೋಟ್‌ಬುಕ್ ಬಳಸುವಂತೆ ಮಾರ್ಗದರ್ಶನವನ್ನು ನೀಡುವುದು. ನಿಯೋಜಿತ ಕಾರ್ಯಗಳನ್ನು ಪರಿಶೀಲಿಸಿ, ಹಿಮ್ಮಾಹಿತಿ ಸಹಿತ ಮುಂದಿನ ಕಲಿಕೆಗೆ ಮಾರ್ಗದರ್ಶನವನ್ನು ನೀಡುವುದು.
15. ಇ.ಎನ್.ಕೆ ಲೆವೆಲ್-03ರ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಇ-ಸಂಪನ್ಮೂಲಗಳನ್ನು ಡಿ.ಎಸ್.ಇ.ಆರ್.ಟಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪೂರಕ ಮಾರ್ಗದರ್ಶನಕ್ಕಾಗಿ ಶಿಕ್ಷಕರು ಇವುಗಳನ್ನು ಅವಲೋಕಿಸುವುದು.