ವಿಜಯಪುರ : ರಾಜ್ಯ ಸರ್ಕಾರದ ಜಾತಿಗಣತಿ ವರದಿ ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಸಮೀಕ್ಷೆ ಸರಿಯಾಗಿ ಆಗಿಲ್ಲ. ಮುಸ್ಲಿಂ ನಂಬರ್ ಒನ್ ಆದರೆ ಅಲ್ಪಸಂಖ್ಯಾತ ಸ್ಥಾನದಿಂದ ಇಳಿಸಿ, ರಾಜ್ಯದಲ್ಲಿ ದಲಿತರೇ ನಂಬರ್ ಒನ್ ಎಂದರು.
ಬ್ರಾಹ್ಮಣರು 2% ಇದ್ದರೆ ಅವರಿಗೆ ಅಲ್ಪಸಂಖ್ಯಾತ ಸ್ಥಾನ ನೀಡಿ. ಮರಾಠರು, ಬೌದ್ಧರು, ಕ್ರಿಶ್ಚಿಯನ್ನರಿಗೆ ಅಲ್ಪಸಂಖ್ಯಾತ ಸ್ಥಾನ ಸಿಗಬೇಕು. ಲಿಂಗಾಯತರನ್ನು ಒಡೆದಂತೆ ಮುಸ್ಲಿಂರನ್ನು ಒಡೆಯಲಿ. ಸರ್ಕಾರ ಮುಸ್ಲಿಂರನ್ನು ಜಾತಿವಾರು ಒಡೆಯಲಿ ಎಂದು ಹೇಳಿದ್ದಾರೆ.