ಬೆಂಗಳೂರು : ವಾಹನ ಸವಾರರೇ ಗಮನಿಸಿ ಯಾವ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಯಾವುದಕ್ಕೆ ಎಷ್ಟು ದಂಡ ಬೀಳಲಿದೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
01. ಹೆಲ್ಮಟ್ ಧರಿಸದೇ ವಾಹನ ಚಾಲನೆ
ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಡಿ) 500 ರೂ. ದಂಡ.
02. ಹಿಂಬದಿ ಸವಾರ ಹೆಲೈಟ್ ಧರಿಸದೇ ವಾಹನ ಸವಾರಿ
ಕೆ.ಎಂ.ವಿ ನಿಯಮ 230(1) 500 ರೂ. ದಂಡ
03. ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ
ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಬಿ) 500 ರೂ. ದಂಡ
04. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ
ಐ.ಎಂ.ವಿ ಕಾಯ್ದೆ ಸೆಕ್ಷನ್ 184 (ಸಿ) 1,000 ರೂ. ದಂಡ
05. ಅಜಾಗರೂಕತೆ/ಅಪಾಯಕಾರಿ ಯಾಗಿ ವಾಹನ ಚಾಲನೆ.
ಐ.ಎಂ.ವಿ ಕಾಯ್ದೆ ಸೆಕ್ಷನ್ 184 1,000 ರೂ. ದಂಡ
06. ತುರ್ತು ಸೇವಾ ವಾಹನಗಳಿಗೆ ದಾರಿಕೊಡಲು ವಿಫಲವಾದರೆ
ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಇ) 1,000 ರೂ. ದಂಡ
07. ನಿಷೇದಿತ/ನಿರ್ಬಂಧಿತ ವಲಯಗಳಲ್ಲಿ ಹಾರ್ನ್ ಬಳಕೆ
ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಎಫ್) 2W/3W-500/- ಇತರೆ ವಾಹನಗಳು- 1,000 ರೂ. ದಂಡ