ಚಿಕ್ಕಮಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅತ್ತೆ-ಸೊಸೆ ಬೋರ್ ವೆಲ್ ಕೊರೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಶೆಟ್ಟಿಕೊಪ್ಪ ಗ್ರಾಮದ ಜೇಮ್ಸ್ ಎಂಬುವವರು ಕಳೆದ ವರ್ಷ ಎರಡು ಬೋರ್‌ಗಳನ್ನು ಕೊರೆಸಿದ್ದರೂ ಅವು ವಿಫಲವಾಗಿದ್ದವು. ಆರ್ಥಿಕ ಸಂಕಷ್ಟದಿಂದ ಮತ್ತೊಂದು ಬೋರ್‌ವೆಲ್ ಕೊರೆಸಲು ಆಗಿರಲಿಲ್ಲ. ಜೇಮ್ಸ್ ಅವರ ತಾಯಿ ಫಿಲೋಮಿನಾ ಬೇರೆಡೆ ವಾಸವಾಗಿದ್ದರು. ಫಿಲೋಮಿನಾ ಹಾಗೂ ಜೇಮ್ಸ್ ಪತ್ನಿ ಜೆಸ್ಸಿ ಅವರು ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ 13 ಕಂತುಗಳ ಹಣವನ್ನು ಕೂಡಿಟ್ಟಿದ್ದರು. ಒಟ್ಟು ₹52 ಸಾವಿರ ಹಣದಿಂದ ಹಾಗೂ ಇನ್ನುಳಿದ ಹಣವನ್ನು ಕೈಯಿಂದ ಭರಿಸಿ ಹೊಸದಾಗಿ ಬೋರ್‌ವೆಲ್ ಕೊರೆಸಿದ್ದು 3 ಇಂಚು ನೀರು ಲಭಿಸಿದೆ.