ಬೆಳಗಾವಿ : ಶಾಸಕ ಬಸನಗೌಡ ಪಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ ದುರದೃಷ್ಟಕರ, ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಆದರೆ ಮಾಧ್ಯಮಗಳಲ್ಲಿ ಬಂದಿರುವುದೇ ಬೇರೆ. ಹೊಸ ಪಕ್ಷ ಕಟ್ಟುವ ವಿಚಾರವಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಬಾರದಿತ್ತು. ಯತ್ನಾಳ್ ಬಿಜೆಪಿಯಲ್ಲಿಯೇ ಮುಂದುವರೆಯುತ್ತಾರೆ. ಎಲ್ಲಿಯೂ ಹೋಗಲ್ಲ. ಮೊನ್ನೆ ನಡೆದ ಶಾಸಕರ ಸಭೆಯಲ್ಲಿಯೂ ಚರ್ಚೆಯಾಗಿದೆ ಎಂದರು.
ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಪ್ರತಿಕ್ರಿಯಿಸಿ, ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಆದರೆ ಮಾಧ್ಯಮಗಳಲ್ಲಿ ಬಂದಿರುವುದೇ ಬೇರೆ. ಹೊಸ ಪಕ್ಷ ಕಟ್ಟುವ ವಿಚಾರವಿಲ್ಲ. ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದೇವೆ. ಯತ್ನಾಳ್ ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.