ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ಅವರು ಘರ್ ವಾಪ್ಸಿಯಾಗುವುದು ನಿಶ್ಚಿತವಾಗಿದ್ದು, ಇಂದು ಪದಾಧಿಕಾರಿಗಳು, ಬೆಂಬಗಲಿರೊಂದಿಗೆ ಬಿಜೆಪಿ ಪಕ್ಷವನ್ನು ಶಾಸಕ ಜನಾರ್ಧನ ರೆಡ್ಡಿ ಇಂದು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಈ ಸಂಬಂಧ ತಮ್ಮ ನಿವಾಸದಲ್ಲಿ ಸಭೆ ನಡೆಸಿದಂತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಜನಾರ್ಧನರೆಡ್ಡಿ ಅವರು, ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸೋಮವಾರ ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿಪಿ ಪಕ್ಷವನ್ನು ವೀಲನಗೊಳಿಸೋದಾಗಿ ತಿಳಿಸಿದರು.
ಸೋಮವಾರ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸುವುದರ ಜೊತೆಗೆ, ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತಾವು ಸೇರ್ಪಡೆಯಾಗಲಿದ್ದೇನೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರೋದಾಗಿ ತಿಳಿಸಿದರು.