ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂದು ಅಫಜಲಪುರದಲ್ಲಿ 22 ವರ್ಷದ ಭಾಗ್ಯಶ್ರೀ ಎನ್ನುವವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ್ದಾರೆ. ಹಾಗಾದ್ರೆ ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ತಾಯಿ ಮರಣ ಪ್ರಕರಣಗಳು ಎಷ್ಟು ಅಂತ ಮುಂದೆ ಓದಿ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್.11, 2024ರಂದು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. ನವೆಂಬರ್.9, 10 ಮತ್ತು 11ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ನಂತ್ರ ಈ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಈ ಮೂರು ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ನಲ್ಲಿ 7 ಪ್ರಕರಣಗಳು ತೊಂದರೆಗೆ ಈಡಾಗಿರುತ್ತದೆ. ಮೂತ್ರಪಿಂಡದ ತೊಂದರೆಯಿಂದ ಮತ್ತು ಬಹು ಅಂಗಗಳ ವೈಫಲ್ಯತೆ ಕಾರಣದಿಂದ 7 ಪ್ರಕರಣಗಳಲ್ಲಿ ಐವರು ಬಾಣಂತಿಯರು ಸಾವಿಗೀಡಾಗಿದ್ದು, ಉಳಿದ 2 ಬಾಣಂತಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ ಎಂದಿದ್ದಾರೆ.
ಈ ಪ್ರಕರಣಗಳ ಬಳಿಕ ಎಚ್ಚೆತ್ತುಕೊಳ್ಳಲಾಗಿದೆ. ಬಾಣಂತಿಯರ ಸಾವಿನ ನಿಯಂತ್ರಣದ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಬಾಣಂತಿಯರ ಸಾವಿನ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೀಗಿದೆ ಕರ್ನಾಟಕದಲ್ಲಿ ಕಳೆದ 5 ವರ್ಷಗಳ ತಾಯಿ ಮರಣ ಹಾಗೂ ಪ್ರಮಾಣಗಳು
2019-20ರಲ್ಲಿ 662 ತಾಯಿ ಮರಣ ಪ್ರಕರಣಗಳು ದಾಖಲಾಗಿದ್ದರೇ, ತಾಯಿ ಮರಣ ಪ್ರಮಾಣ 74 ಆಗಿರುತ್ತದೆ.
2020-21ನೇ ಸಾಲಿನಲ್ಲಿ 714 ಬಾಣಂತಿಯರು ಸಾವನ್ನಪ್ಪಿದ್ದರೇ, ಒಟ್ಟಾರೆ ಶೇಕಡವಾರು ಪ್ರಮಾಣ 84%.
2021-22ರಲ್ಲಿ 594 ತಾಯಿ ಮರಣ ಪ್ರಕರಣಗಳು ನಡೆದಿವೆ. ಇದರ ಪ್ರಮಾಣ ಶೇ.68.
2022-23ರಲ್ಲಿ 527 ಬಾಣಂತಿಯರು ಸಾವನ್ನಪ್ಪಿದ್ದಾರೆ. ಶೇ.65 ಪ್ರಮಾಣವಾಗಿದೆ.
2023-24ರಲ್ಲಿ 518 ತಾಯಿ ಮರಣ ಪ್ರಕರಣಗಳಾಗಿವೆ. ಇದರ ಶೇಕಡವಾರು ಪ್ರಮಾಣ 64%.
2024-25ರ ನವೆಂಬರ್ ವರೆಗೆ 348 ಬಾಣಂತಿಯರು ಸಾವನ್ನಪ್ಪಿದ್ದಾರೆ. ಶೇಕಡವಾರು ಪ್ರಮಾಣ 64% ಆಗಿರುತ್ತದೆ.
ತಾಯಿ ಶಿಶು ಮರಣ ಪ್ರಮಾಣವನ್ನು ತಗ್ಗಿಲಸು ಇಲಾಖೆ ನಿರಂತರ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ತಾಯಿ ಶಿಶು ಮರಣ ಪ್ರಮಾಣ ಇಳಾಖೆಯಾಗುತ್ತಿದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಒಟ್ಟಾರೆ ವರ್ಷದಿಂದ ವರ್ಷಕ್ಕೆ ಬಾಣಂತಿಯರ ಸಾವಿನ ಪ್ರಮಾಣ ಇಳಿಕೆಯಾಗಿದೆಯೇ ವಿನಹ ಏರಿಕೆಯಾಗಿಲ್ಲ. 2019-20ರಲ್ಲಿ ಶೇ.74ರಷ್ಟು ಇದ್ದಂತ ಪ್ರಮಾಣ, 2024-25ರ ವೇಳೆಗೆ ಶೇ.64ಕ್ಕೆ ಬಂದು ತಲುಪಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು