ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಾಹ ನೋದಂಣಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಬದಲಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋ ನಿಮಗೆ ವಿವಾಹ ನೋಂದಣಿ ಮಾಜಿಸಬೇಕು ಅಂದ್ರೇ ಜಸ್ಟ್ ಕುಳಿತಲ್ಲೇ ಆನ್ ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಅದು ಹೇಗೆ ಅಂತ ಮುಂದೆ ಓದಿ.
ಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ, ನೋಂದಣಿಯಾಗಲಿ ಕಾವೇರಿ 2.0ರಲ್ಲಿ, ನಿಮ್ಮ ಮನೆಯಲ್ಲೇ ನೆಮ್ಮದಿ ಗ್ಯಾರಂಟಿ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ. ಜೊತೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸುಲಭ, ಸರಳ, ಸುಲಲಿತವಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದೆ.
ಆನ್ ಲೈನ್ ನಲ್ಲೇ ವಿವಾಹ ನೋಂದಣಿಗಾಗಿ ಈ ಹಂತ ಅನುಸರಿಸಿ
https://kaveri.karnataka.gov.in ಗೆ ಭೇಟಿ ನೀಡಿ. ಬಳಕೆದಾರರ ಖಾತೆಯನ್ನು ತೆರೆಯಿರಿ.
ಕಾವೇರಿ ಪೋರ್ಟಲ್ ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆ ಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ.
ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ.
ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆಯಾಗಿ, ಆನ್ ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ ದೊರೆಯಲಿದೆ.
ಕಾವೇರಿ ಪೋರ್ಟಲ್ ನಲ್ಲಿ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ.