ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಹೂರಣವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರೂಪಿಸಲಾದ ವಿನೂತನ ಬಾನುಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಮಾನತೆಯ ಬೆಳಕು, ಶೋಷಿತರ ಧ್ವನಿ, ಸಂವಿಧಾನದ ರೂವಾರಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನಾ ಲಹರಿ, ವಿಚಾರಧಾರೆ, ಸಾಮಾಜಿಕ ಹೋರಾಟಗಳ ಹೂರಣವನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರೂಪಿಸಲಾದ ವಿನೂತನ ಬಾನುಲಿ ಕಾರ್ಯಕ್ರಮವೇ “ಮನೆ ಮನೆಯ ಹಣತೆ” 26 ಕಂತುಗಳಲ್ಲಿ ಪ್ರತಿ ಶನಿವಾರ 7.15 ರಿಂದ 7.30ರವರೆಗೆ ಪ್ರಸಾರವಾಗಲಿದೆ.