Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಗಡಿ ಕಾಯಲು ಬರಲಿವೆ ಹಾವು-ಮೊಸಳೆಗಳು! ಬಾಂಗ್ಲಾ ನುಸುಳುವಿಕೆ ತಡೆಯಲು ಬಿಎಸ್‌ಎಫ್ ಮಾಸ್ಟರ್ ಪ್ಲಾನ್

06/04/2026 7:49 AM

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ
KARNATAKA

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

By kannadanewsnow5706/04/2026 7:44 AM

ಬೆಂಗಳೂರು: ಲೋಕ ಅದಾಲತ್‌ನಲ್ಲಿ ನೀಡಲಾಗುವ ತೀರ್ಪುಗಳು ಅಂತಿಮ ಮತ್ತು ಪ್ರಶ್ನಾತೀತ ಎಂಬ ಸಾಮಾನ್ಯ ನಂಬಿಕೆಯ ನಡುವೆ ಹೈಕೋರ್ಟ್ ಅತ್ಯಂತ ಮಹತ್ವದ ಆದೇಶವೊಂದನ್ನು ನೀಡಿದೆ. “ಪಕ್ಷಗಾರರ ಅನುಪಸ್ಥಿತಿಯಲ್ಲಿ ಅಥವಾ ಅವರ ಗಮನಕ್ಕೆ ಬಾರದೆ ನೀಡಲಾದ ಲೋಕ ಅದಾಲತ್ ತೀರ್ಪು ಎಲ್ಲಾ ಕಾಲಕ್ಕೂ ಕಾನೂನುಬದ್ಧ ಎಂದು ಹೇಳಲಾಗದು,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ಹುಬ್ಬಳ್ಳಿಯ ಆನಂದನಗರದ ನಿವಾಸಿಗಳಾದ ಶೈಲಾ ಮತ್ತು ಅವರ ಮಗ ವಿಶಾಲ್ ಎಂಬುವವರು ಮೋಟಾರ್ ವಾಹನ ಅಪಘಾತ ಪ್ರಕರಣವೊಂದರಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಲೋಕ ಅದಾಲತ್‌ನಲ್ಲಿ ಇವರ ಪರ ವಾದ ಮಂಡಿಸಿದ್ದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿ ನಡುವೆ ಸಂಧಾನ ನಡೆದು, ಪರಿಹಾರದ ಮೊತ್ತವನ್ನು ಕಡಿಮೆ ಮಾಡಲಾಗಿತ್ತು. ಆದರೆ, ಈ ಸಂಧಾನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ತಾವು ಯಾವುದೇ ಜಂಟಿ ಮೆಮೋಗೆ ಸಹಿ ಹಾಕಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ಪರ ತೀರ್ಪು ನೀಡಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:

ಅರ್ಜಿದಾರರಿಗೆ ವಾರ್ಷಿಕ ಶೇ. 6ರ ಬಡ್ಡಿಯಂತೆ ಒಟ್ಟು 9,18,600 ರೂ. ಪರಿಹಾರ ನೀಡಬೇಕು ಎಂಬ ನ್ಯಾಯಮಂಡಳಿಯ ಮೂಲ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾಗಬೇಕಾದರೆ ಉಭಯ ಪಕ್ಷಗಾರರು ಜಂಟಿ ಮೆಮೋಗೆ ಸಹಿ ಹಾಕುವುದು ಕಡ್ಡಾಯ. ಕೇವಲ ವಕೀಲರ ಸಹಿಯ ಆಧಾರದ ಮೇಲೆ ನೀಡಲಾದ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ.ಲೋಕ ಅದಾಲತ್‌ನ ಸದಸ್ಯರು ಇತ್ಯರ್ಥದ ಸಮಯದಲ್ಲಿ ಪಕ್ಷಗಾರರು ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ವಿಮಾ ಕಂಪನಿಯ ವಾದಕ್ಕೆ ಹಿನ್ನಡೆ:

ರಿಟ್ ಅರ್ಜಿಯನ್ನು ಮನ್ನಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಸಂಧಾನಗಳಿಗೆ ತೊಂದರೆಯಾಗುತ್ತದೆ ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಅರ್ಜಿದಾರರು ಜಂಟಿ ಮೆಮೋಗೆ ಸಹಿ ಹಾಕದಿರುವುದೇ ಇಲ್ಲಿ ಮುಖ್ಯವಾದ ಅಂಶ ಎಂದು ಪೀಠ ಪರಿಗಣಿಸಿದೆ.

ಈ ತೀರ್ಪು ಲೋಕ ಅದಾಲತ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪಕ್ಷಗಾರರ ನೇರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ.

BIG NEWS: `Lok Adalat verdict' is not beyond question: High Court's important order
Share. Facebook Twitter LinkedIn WhatsApp Email

Related Posts

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM2 Mins Read

ಗಮನಿಸಿ : ಬಾಡಿಗೆ ಒಪ್ಪಂದ 11 ತಿಂಗಳಿಗೆ ಮಾತ್ರ ಏಕೆ ಇರುತ್ತೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

06/04/2026 7:38 AM2 Mins Read

Rain ALERT : ರಾಜ್ಯದ 22 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ

06/04/2026 7:08 AM1 Min Read
Recent News

​ಗಡಿ ಕಾಯಲು ಬರಲಿವೆ ಹಾವು-ಮೊಸಳೆಗಳು! ಬಾಂಗ್ಲಾ ನುಸುಳುವಿಕೆ ತಡೆಯಲು ಬಿಎಸ್‌ಎಫ್ ಮಾಸ್ಟರ್ ಪ್ಲಾನ್

06/04/2026 7:49 AM

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

ಗಮನಿಸಿ : ಬಾಡಿಗೆ ಒಪ್ಪಂದ 11 ತಿಂಗಳಿಗೆ ಮಾತ್ರ ಏಕೆ ಇರುತ್ತೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

06/04/2026 7:38 AM
State News
KARNATAKA

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

By kannadanewsnow5706/04/2026 7:44 AM KARNATAKA 1 Min Read

ಬೆಂಗಳೂರು: ಲೋಕ ಅದಾಲತ್‌ನಲ್ಲಿ ನೀಡಲಾಗುವ ತೀರ್ಪುಗಳು ಅಂತಿಮ ಮತ್ತು ಪ್ರಶ್ನಾತೀತ ಎಂಬ ಸಾಮಾನ್ಯ ನಂಬಿಕೆಯ ನಡುವೆ ಹೈಕೋರ್ಟ್ ಅತ್ಯಂತ ಮಹತ್ವದ…

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

ಗಮನಿಸಿ : ಬಾಡಿಗೆ ಒಪ್ಪಂದ 11 ತಿಂಗಳಿಗೆ ಮಾತ್ರ ಏಕೆ ಇರುತ್ತೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

06/04/2026 7:38 AM

Rain ALERT : ರಾಜ್ಯದ 22 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆ

06/04/2026 7:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.