ಬೆಂಗಳೂರು : ಮಾರ್ಚ್ 30, 31 ರಂದು ಯುಗಾದಿ ಹಾಗೂ ರಂಜಾನ್ ಹಬ್ಬದಂದು ಬಿಬಿಎಂಪಿಯ ಅಧಿಕಾರಿಗಳು, ಸಿಬ್ಬಂದಿಗಳ ರಜೆ ರದ್ದುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.
ಹೌದು, 2024-25 ನೇ ಆರ್ಥಿಕ ವರ್ಷದ ಕೊನೆಯ ದಿನಗಳಾದ ಮಾರ್ಚ್ 30 ರಂದು ಭಾನುವಾರ ಯುಗಾದಿ ಹಾಗೂ ಮಾರ್ಚ್ 31 ರ ಸೋಮವಾರ ರಂಜಾನ್ ಹಬ್ಬವಿದೆ. ಹೀಗಾಗಿ ದುಬಾರಿ ದಂಡ ಇಲ್ಲದೇ ಆಸ್ತಿ ತೆರಿಗೆ ಪಾವತಿಗೆ ಹಾಗೂ ನಗರದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿ ಕಟ್ಟಡಗಳ ಬಾಕಿ ಇರುವ ಆಸ್ತಿ ತೆರಿಗೆ ವಿಧಿಸಲಾದ ಬಡ್ಡಿ, ದಂಡ ವಿನಾಯಿತಿ ನೀಡಿ ಬಾಲಿ ಪಾವತಿಗೆ ಜಾರಿಗೊಳಿಸಲಾದ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆಗೂ ಮಾರ್ಚ್ 31 ಕೊನೆಯ ದಿನವಾಗಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 30 ಹಾಗೂ 31 ರಂದು ಹೆಚ್ಚಿನ ಸಂಖ್ಯೆ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ಮುಂದಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯುಗಾದಿ ಹಾಗೂ ರಂಜಾನ್ ಗೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗಳ ರಜೆ ರದ್ದುಗೊಳಿಸಲಾಗಿದೆ.