Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

10/03/2026 10:02 PM

ಗಣಿತ ಪತ್ರಿಕೆಯಲ್ಲಿ ಯೂಟ್ಯೂಬ್ ‘QR ಕೋಡ್’ ಕುರಿತು ‘CBSE’ ಸ್ಪಷ್ಟನೆ! ಹೇಳಿದ್ದೇನು ಗೊತ್ತಾ?

10/03/2026 9:46 PM

ಭಾರತದಲ್ಲಿ ಪ್ರಸ್ತುತ ‘ಪೆಟ್ರೋಲ್’ ಸ್ಟಾಕ್ ಎಷ್ಟಿದೆ ಗೊತ್ತಾ.? ಇನ್ನೂ ಎಷ್ಟು ದಿನಗಳಿಗೆ ಸರಿಯೋಗ್ಬೋದು.?

10/03/2026 9:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಿಧಾನ ಪರಿಷತ್ತಿನಲ್ಲೂ `ಕರ್ನಾಟಕ ಬಾಡಿಗೆ ವಿಧೇಯಕ ಅಂಗೀಕಾರ’ : ಇನ್ಮುಂದೆ ಮಾಲೀಕರು, ಬ್ರೋಕರ್ ಗಳಿಗೆ ದಂಡ ಫಿಕ್ಸ್.!
KARNATAKA

BIG NEWS : ವಿಧಾನ ಪರಿಷತ್ತಿನಲ್ಲೂ `ಕರ್ನಾಟಕ ಬಾಡಿಗೆ ವಿಧೇಯಕ ಅಂಗೀಕಾರ’ : ಇನ್ಮುಂದೆ ಮಾಲೀಕರು, ಬ್ರೋಕರ್ ಗಳಿಗೆ ದಂಡ ಫಿಕ್ಸ್.!

By kannadanewsnow5718/12/2025 6:16 AM
suvarna soudha belagavi

ಬೆಳಗಾವಿ ಸುವರ್ಣಸೌಧ :‌ ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಬಾಡಿಗೆ ಅಧಿನಿಯಮ, 1999ನ್ನು ಮತ್ತಷ್ಟು ತಿದ್ದುಪಡಿ ಮಾಡುವ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕವನ್ನು ಮೇಲ್ಮನೆಯಲ್ಲಿ ಡಿ.17ರಂದು ಅಂಗೀಕರಿಸಲಾಯಿತು. ಹೀಗಾಗಿ ಇನ್ಮುಂದೆ ನಿಯಮ ಮೀರಿದಂತ ಮಾಲೀಕರು, ಬ್ರೋಕರ್ ಗಳಿಗೂ ದಂಡ ಫಿಕ್ಸ್ ಆದಂತೆ ಆಗಿದೆ.

ಬಾಡಿಗೆ ಹೆಸರಿನಲ್ಲಿ ಕೆಲ ಕಡೆಗಳಲ್ಲಿ ಆಘಾತಕಾರಿ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ದುರುಪಯೋಗಕ್ಕೆ ಅವಕಾಶವಿಲ್ಲದ ಹಾಗೆ ಎಚ್ಚರ ವಹಿಸಿ ಈ ಕಾಯಿದೆಯನ್ನು ತಿದ್ದುಪಡಿ ಮಾಡಬೇಕಿದೆ ಎಂದು ಸದಸ್ಯರಾದ ನವೀನ ಕೆ.ಎಸ್., ಐವನ್ ಡಿ’ಸೋಜಾ, ರಮೇಶಬಾಬು ಹಾಗೂ ಇನ್ನೀತರರು ಸಲಹೆ ಮಾಡಿದರು.

ತಪ್ಪಿತಸ್ಥರನ್ನು ದಂಡದ ಮೂಲಕ ಶಿಕ್ಷೆಗೆ ಗುರಿಪಡಿಸುವುದು, ದಂಡದ ಮೊತ್ತ ಹೆಚ್ಚಳ ಮಾಡುವುದು ಕಾಯಿದೆಯ ತಿದ್ದುಪಡಿ ಹಿಂದಿನ ಉದ್ದೇಶವಾಗಿದೆ. ಮೂಲ ಕಾಯಿದೆಯಲ್ಲಿನ ಮಹತ್ವದ ಅಂಶಗಳನ್ನು ತಿದ್ದುಪಡಿ ಮಾಡಿಲ್ಲ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿ, ಮಸೂದೆಯ ಅಂಗೀಕಾರಕ್ಕೆ ಕೋರಿದರು.

ಸಭಾಪತಿಯವರು, ವಿಧೇಯಕವನ್ನು ಅಂಗೀಕರಿಸಲು ಧ್ವನಿಮತಕ್ಕೆ ಹಾಕಿದರು. ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ 2025ದಲ್ಲಿ ಏನಿದೆ.? 

ಮಂಗಳವಾರದಂದು ವಿಧಾನಸಭೆಯಲ್ಲಿ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ-2025 ಮಂಡಿಸಿ ಮಾತನಾಡಿದಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಇದೊಂದು ಸರಳ ವಿಧೇಯಕ. ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲಾ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ ಎಂದರು.

ಮೂಲ ವೀಧೇಯಕದಲ್ಲಿ ಉಲ್ಲಂಘನೆಯಾದರೆ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನೂ ತಪ್ಪಿಸಬೇಕು ಎಂಬ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನನ್ನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಗಣನೀಯವಾಗಿ ತಡೆಯಬಹುದು ಎಂದು ಅಭಿಪ್ರಾಯಪಟ್ಟರು.

 

BIG NEWS: Karnataka Rent Bill passed in Legislative Council: Fines fixed for owners and brokers from now on!
Share. Facebook Twitter LinkedIn WhatsApp Email

Related Posts

ಮಂಗಳೂರಲ್ಲಿ ರೈಲಿನಲ್ಲಿ ನಿಗೂಢವಾಗಿ ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಜಪ್ತಿ

10/03/2026 9:22 PM1 Min Read

ವೇತನ ಪಾವತಿಗೆ ಆಗ್ರಹ: GBA ಪಶ್ಚಿಮ ನಗರ ಪಾಲಿಕೆ ಕೆಲಸ ಸ್ಥಗಿತದ ಎಚ್ಚರಿಕೆ ನೀಡಿದ ಕ್ಷೇಮಾಭಿವೃದ್ಧಿ ಸಂಘ

10/03/2026 9:15 PM1 Min Read

BREAKING: ಸಚಿವ ದಿನೇಶ್ ಗುಂಡೂರಾವ್ ಜೊತೆಗಿನ ಸಂಧಾನ ಸಕ್ಸಸ್: ನಾಳೆಯ ವೈದ್ಯರ ಮುಷ್ಕರ ವಾಪಾಸ್

10/03/2026 9:06 PM1 Min Read
Recent News

ಗ್ಯಾಸ್ ಅಗತ್ಯವಿಲ್ಲ, ಈ ಸುಲಭ ಪಾಕವಿಧಾನಗಳನ್ನ ಟ್ರೈ ಮಾಡಿ, ಟೇಸ್ಟ್ ಮಾಡಿ!

10/03/2026 10:02 PM

ಗಣಿತ ಪತ್ರಿಕೆಯಲ್ಲಿ ಯೂಟ್ಯೂಬ್ ‘QR ಕೋಡ್’ ಕುರಿತು ‘CBSE’ ಸ್ಪಷ್ಟನೆ! ಹೇಳಿದ್ದೇನು ಗೊತ್ತಾ?

10/03/2026 9:46 PM

ಭಾರತದಲ್ಲಿ ಪ್ರಸ್ತುತ ‘ಪೆಟ್ರೋಲ್’ ಸ್ಟಾಕ್ ಎಷ್ಟಿದೆ ಗೊತ್ತಾ.? ಇನ್ನೂ ಎಷ್ಟು ದಿನಗಳಿಗೆ ಸರಿಯೋಗ್ಬೋದು.?

10/03/2026 9:40 PM

ಮಂಗಳೂರಲ್ಲಿ ರೈಲಿನಲ್ಲಿ ನಿಗೂಢವಾಗಿ ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಜಪ್ತಿ

10/03/2026 9:22 PM
State News
KARNATAKA

ಮಂಗಳೂರಲ್ಲಿ ರೈಲಿನಲ್ಲಿ ನಿಗೂಢವಾಗಿ ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಜಪ್ತಿ

By kannadanewsnow0910/03/2026 9:22 PM KARNATAKA 1 Min Read

ಮಂಗಳೂರು: ರೈಲಿನಲ್ಲಿ ನಿಗೂಢವಾಗಿ ಸಾಗಿಸುತ್ತಿದ್ದಂತ 200ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳನ್ನು ರೈಲ್ವೆ ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.…

ವೇತನ ಪಾವತಿಗೆ ಆಗ್ರಹ: GBA ಪಶ್ಚಿಮ ನಗರ ಪಾಲಿಕೆ ಕೆಲಸ ಸ್ಥಗಿತದ ಎಚ್ಚರಿಕೆ ನೀಡಿದ ಕ್ಷೇಮಾಭಿವೃದ್ಧಿ ಸಂಘ

10/03/2026 9:15 PM

BREAKING: ಸಚಿವ ದಿನೇಶ್ ಗುಂಡೂರಾವ್ ಜೊತೆಗಿನ ಸಂಧಾನ ಸಕ್ಸಸ್: ನಾಳೆಯ ವೈದ್ಯರ ಮುಷ್ಕರ ವಾಪಾಸ್

10/03/2026 9:06 PM

ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ: ರಾಜ್ಯದಲ್ಲಿ ಮಾರ್ಚ್ 27ರವರೆಗೆ ಸರ್ಕಾರಿ ಹುದ್ದೆಗಳ ಅಧಿಸೂಚನೆಗೆ ಬ್ರೇಕ್

10/03/2026 8:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.