ಬೆಂಗಳೂರು : ಕ್ರೀಡೆ, ಎನ್‌ಸಿಸಿ, ರಕ್ಷಣೆ ಸೇರಿ ಇತರ ವಿಶೇಷ ವರ್ಗ ಹಾಗೂ ಸಿಇಟಿ ಅರ್ಜಿಯಲ್ಲಿ ವಿವಿಧ ಕೋಟಾಗಳನ್ನು ನಮೂದಿಸಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಕಾರ್ಯವು ಮೇ 5ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.
ಕೆಇಎ ವೆಬ್‌ಸೈಟ್‌ನಲ್ಲಿ ತಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ಒಂದೆರಡು ದಿನಗಳಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಈ ಹಿಂದೆ ಸಿಇಟಿ ರ್ಯಾಂಕ್ ಬಂದ ನಂತರ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೂ ಮೊದಲೇ ದಾಖಲೆ ಪರಿಶೀಲನೆ ಮಾಡಿಕೊಂಡು, ಫಲಿತಾಂಶ ನಂತರ ಅಪ್ಪನ್ ಎಂಟ್ರಿಗೆ ಅವಕಾಶ ನೀಡಲಾಗುತ್ತಿದೆ. ಮೇ 2ರವರೆಗೆ ಅರ್ಜಿಯಲ್ಲಿನ ದೋಷ ಗಳನ್ನು ಸರಿಪಡಿಸಿಕೊಳ್ಳಲು ಬಿಟ್ಟಿದ್ದು, ಇದುವರೆಗೂ 16 ಸಾವಿರಕ್ಕೂ ಹೆಚ್ಚು ಮಂದಿ ತಿದ್ದುಪಡಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಮತ್ತೊಮ್ಮೆ ತಮ್ಮ ಸಂಬಂಧಪಟ್ಟ ಪಿಯು ಕಾಲೇಜು ಅಥವಾ ಹತ್ತಿರದ ಸರ್ಕಾರಿ ಪಿಯು ಕಾಲೇಜಿಗೆ ಹೋಗಿ ತಮ್ಮ ಅರ್ಜಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
UGCET-25 ಕ್ರೀಡೆ, ಎನ್‌ಸಿಸಿ ಸೇರಿದಂತೆ ಇತರ ವಿಶೇಷ ವರ್ಗ ಹಾಗೂ ಕ್ಲಾಸ್ 'ಬಿ' ಯಿಂದ 'ಝೆಡ್' ವರೆಗೆ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮೇ 5ರಿಂದ #KEA ಕಚೇರಿಯಲ್ಲಿ ನಡೆಯಲಿದೆ. ಈ ಸಂಬಂಧ #KEA ED ಎಚ್.ಪ್ರಸನ್ನ ಮಾತನಾಡಿರುವ ವಿಡಿಯೊ ಲಿಂಕ್ ಇಲ್ಲಿದೆ.https://t.co/5bHyUG8RoI@CMofKarnataka @drmcsudhakar
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) April 22, 2025