ಕನ್ನಡಿಗರ ಪರಿಶ್ರಮದಿಂದ ಉತ್ತರ ಭಾರತೀಯರಿಗೆ ಲಾಭವಾಗುತ್ತಿದೆ. ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಕಟ್ಟಿದರು ಸಹ ನಮಗೆ ಮರಳಿ ಬರುವುದು ಬಿಡಿಗಾಸು ಮಾತ್ರ. ಇದನ್ನು ಪ್ರಶ್ನಿಸಲು ಯಾವೊಬ್ಬ ಬಿಜೆಪಿ ನಾಯಕರು, ಸಂಸದರು ಮುಂದೆ ಬಾರದಿರುವುದು ಈ ನಾಡಿನ ದುರ್ದೈವ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಉತ್ತರಪ್ರದೇಶದವರು ₹100 ತೆರಿಗೆ ಕಟ್ಟಿದರೆ ಅವರಿಗೆ ಸಿಗುವ ಪಾಲು ₹333 ರೂಪಾಯಿ, ಮಧ್ಯಪ್ರದೇಶವರು ₹100 ತೆರಿಗೆ ಕಟ್ಟಿದರೆ ಅವರಿಗೆ ಸಿಗುವ ಪಾಲು 292 ರೂಪಾಯಿ, ಬಿಹಾರದವರು ₹100 ತೆರಿಗೆ ಕಟ್ಟಿದರೆ ಅವರಿಗೆ ಸಿಗುವ ಪಾಲು 922 ರೂಪಾಯಿ, ಒರಿಸ್ಸಾದವರು ₹100 ತೆರಿಗೆ ಕಟ್ಟಿದರೆ ಅವರಿಗೆ ಸಿಗುವ ಪಾಲು 187 ರೂಪಾಯಿ ಸಿಗಲಿದೆ ಎಂದರು.
ಆದರೆ ಕನ್ನಡಿಗರು ₹100 ಕಟ್ಟಿದರೆ ಸಿಗುವುದು ಕೇವಲ 12 ರೂಪಾಯಿ ಮಾತ್ರ, ದಕ್ಷಿಣ ರಾಜ್ಯಗಳು ಕಷ್ಟ ಪಟ್ಟು ಕಟ್ಟುವ ತೆರಿಗೆ ಹಣದಲ್ಲಿ ಕೇವಲ ಉತ್ತರ ಭಾರತವನ್ನು ಅಭಿವೃದ್ಧಿ ಮಾಡುತ್ತಿವೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.