ಬೆಳಗಾವಿ : ರಾಜ್ಯಾದ್ಯಂತ ಕನ್ನಡನಾಮಫಲಕ ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ನಿಯಮ ರೂಪಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾ ವನೆಸಲ್ಲಿಸಿದ್ದು, ಶೀಘ್ರ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ಕನ್ನಡನಾಮಫಲಕ ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ಗ್ರಾಮ ಪಂಚಾಯಿತಿಯಿಂದ ರಾಜ್ಯಮಟ್ಟದವರೆಗೆ ವಿವಿಧ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ವಾಣಿಜ್ಯ, ಕೈಗಾರಿಕೆ, ಟ್ರಸ್ಟ್, ಆಸ್ಪತ್ರೆ, ಹೋಟೆಲ್, ಮನರಂಜನಾ ಕೇಂದ್ರ ಮುಂತಾದೆಡೆ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕೆಂದು ಕಾಯ್ದೆ ಜಾರಿಗೆ ತರಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೇ.100, ಕೆಲವೆಡೆ ಶೇ.90-95ರಷ್ಟು ಜಾರಿಗೆ ತರಲಾಗಿದೆ. ಈ ನಿಯಮ ಉಲ್ಲಂಘನೆಗೆ ಮೊದಲ ಬಾರಿ ಅಪರಾಧಕ್ಕೆ 5000 ರೂ. 2ನೇ ಬಾರಿಗೆ 10,000 ರೂ. ಹಾಗೂ ನಂತರದ ಪ್ರತಿ ಅಪರಾಧಕ್ಕೆ 20,000 ರು. ದಂಡ ಸೇರಿದಂತೆ ಪರವಾನಗಿ ರದುಗೊಳಿಸಲು ಅವಕಾಶ ಕಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ನಾಮಫಲಕಗಳ ಅಳವಡಿಕೆ ನಿಗಾವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ
– @sstangadagi , ಕನ್ನಡ ಮತ್ತು ಸಂಸ್ಕೃತಿ ಸಚಿವರು pic.twitter.com/Fv5hE6XHDM
— DIPR Karnataka (@KarnatakaVarthe) December 12, 2025







