ಬೆಂಗಳೂರು : ರಾಜ್ಯದ ಮದರಸಾಗಳಲ್ಲಿ ಕನ್ನಡ ತರಗತಿ ನಡೆಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕನ್ನಡ ಕಲಿಕೆ ಆರಂಭಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕಲಾಸಿಪಾಳ್ಯ ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ತಲಾ ಮೂರು ಮದರಸಾಗಳಲ್ಲಿ ಕನ್ನಡ ತರಗತಿ ಆರಂಭಿಸಲಾಗುವುದು. ಆಗಸ್ಟ್ ನಿಂದಲೇ ತರಗತಿ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
ಮದರಸಾಗಳಲ್ಲಿ ವಾರಕ್ಕೆ ಕನಿಷ್ಟ ಎರಡರಿಂದ ಮೂರು ಗಂಟೆಗಳ ಕನ್ನಡ ತರಗತಿಗಳನ್ನು ಹೇಳಿಕೊಟ್ಟರೆ ಕನ್ನಡ ಬರೆಯಲು ಮತ್ತು ಓದಲು ಸಾಧ್ಯವಿದೆ. ಇದಕ್ಕಾಗಿ ವಿಶೇಷ ಪಠ್ಯಕ್ರಮ ಸಹ ತಯಾರಿಸಲಾಗುವುದು ಎಂದು ಹೇಳಿದ್ದಾರೆ.