Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

31/03/2026 10:50 AM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ಸಂಬಂಧಗಳಿಗೂ ಸಿಗಲಿದೆ ದಂಪತಿ ಸ್ಥಾನಮಾನ; ಅಧಿಕೃತವಾಗಿ ‘ವಿವಾಹಿತರು’ ಎಂದು ಪರಿಗಣನೆ!

31/03/2026 10:48 AM

ALERT : ಇಂದೇ ಕೊನೆಯ ದಿನ: ರಾತ್ರಿ 12 ಗಂಟೆಯೊಳಗೆ ಈ 3 ಕೆಲಸ ಮಾಡದಿದ್ದರೆ ಬಂದ್ ಆಗಲಿದೆ ನಿಮ್ಮ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ!

31/03/2026 10:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ `ಆಸ್ತಿ ತೆರಿಗೆ’ ವಸೂಲಿಗೆ `ಜಿಯೋ ಟ್ಯಾಗ್’ ವ್ಯವಸ್ಥೆ ಜಾರಿ : ಸಚಿವ ರಹೀಂ ಖಾನ್ ಮಾಹಿತಿ
KARNATAKA

BIG NEWS: ರಾಜ್ಯದಲ್ಲಿ `ಆಸ್ತಿ ತೆರಿಗೆ’ ವಸೂಲಿಗೆ `ಜಿಯೋ ಟ್ಯಾಗ್’ ವ್ಯವಸ್ಥೆ ಜಾರಿ : ಸಚಿವ ರಹೀಂ ಖಾನ್ ಮಾಹಿತಿ

By kannadanewsnow5727/01/2025 7:18 AM

ಬಳ್ಳಾರಿ : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಇದಕ್ಕಾಗಿ ಜಿಯೋ ಟ್ಯಾಗ್ ವ್ಯವಸ್ಥೆ ಬರಲಿದೆ. ಶೀಘ್ರದಲ್ಲಿ ರಾಜ್ಯದಾದ್ಯಂತ ಜಾರಿಗೊಳಿಸಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು.

ಜಿಲ್ಲಾಡಳಿತ ವತಿಯಿಂದ ನಗರದ ಬಿಮ್ಸ್ ಮೈದಾನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ಬಹುತೇಕ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಅಧಿಕೃತವಾಗಿ ಹಾಗೂ ಇನ್ನೂ ಕೆಲವು ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಂದಾಯವಾಗಬೇಕಾದ ಭಾರೀ ಪ್ರಮಾಣದ ತೆರಿಗೆ ವಸೂಲಾಗದೇ ಬಾಕಿ ಉಳಿಯುತ್ತಿರುವುದನ್ನು ಸರ್ಕಾರವು ವಸೂಲಿಗೆ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ಹಾಗಾಗಿ ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ತೆರಿಗೆ ವಸೂಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಮಾದರಿಯಲ್ಲಿ ಎಲ್ಲಾ ಆಸ್ತಿಗಳನ್ನು ಎ ಮತ್ತು ಬಿ ಖಾತಾಗಳನ್ನಾಗಿ ವಿಂಗಡಿಸಿ, ರಾಜ್ಯದಾದ್ಯಂತ ಏಕರೀತಿಯ ಕರವಸೂಲಾತಿಗೆ ಜಿಯೋ ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯುಲು, ಪಾಲಿಕೆಯ ಉಪಮೇಯರ್ ಡಿ.ಸುಕುಂ, ಬಳ್ಳಾರಿ ವಲಯ ಪೊಲೀಸ್ ಮಹಾನೀರಿಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಸೇರಿದಂತೆ ಇತರರು ಇದ್ದರು.

ಬಳಿಕ ಸಚಿವರು, ಬಿಮ್ಸ್ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಸ್ವಚ್ಛತಾ ನಿರ್ವಹಣೆ ಕೈಗೊಳ್ಳಬೇಕು. ಮೆನು ಪ್ರಕಾರವೇ ಆಹಾರ ನೀಡಬೇಕು ಎಂದು ವ್ಯವಸ್ಥಾಪಕರಿಗೆ ಸೂಚಿಸಿದರು.

BIG NEWS: 'Jio Tag' system to be implemented in the state to collect property tax: Minister Rahim Khan BIG NEWS: ರಾಜ್ಯದಲ್ಲಿ `ಆಸ್ತಿ ತೆರಿಗೆ' ವಸೂಲಿಗೆ `ಜಿಯೋ ಟ್ಯಾಗ್' ವ್ಯವಸ್ಥೆ ಜಾರಿ : ಸಚಿವ ರಹೀಂ ಖಾನ್ ಮಾಹಿತಿ
Share. Facebook Twitter LinkedIn WhatsApp Email

Related Posts

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

31/03/2026 10:50 AM1 Min Read

BREAKING : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ | 1st PUC Result 2026

31/03/2026 10:30 AM2 Mins Read

BREAKING : ಪರಪ್ಪನ ಅಗ್ರಹಾರ ಜೈಲಿಗೆ ಡ್ರಗ್ಸ್, ಸಿಮ್ ಪೂರೈಕೆ : ಯುವತಿ ಅರೆಸ್ಟ್.!

31/03/2026 10:29 AM1 Min Read
Recent News

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

31/03/2026 10:50 AM

ಜನಗಣತಿ 2027ರಲ್ಲಿ ಹೊಸ ಬದಲಾವಣೆ: ‘ಲಿವ್-ಇನ್’ ಸಂಬಂಧಗಳಿಗೂ ಸಿಗಲಿದೆ ದಂಪತಿ ಸ್ಥಾನಮಾನ; ಅಧಿಕೃತವಾಗಿ ‘ವಿವಾಹಿತರು’ ಎಂದು ಪರಿಗಣನೆ!

31/03/2026 10:48 AM

ALERT : ಇಂದೇ ಕೊನೆಯ ದಿನ: ರಾತ್ರಿ 12 ಗಂಟೆಯೊಳಗೆ ಈ 3 ಕೆಲಸ ಮಾಡದಿದ್ದರೆ ಬಂದ್ ಆಗಲಿದೆ ನಿಮ್ಮ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ!

31/03/2026 10:42 AM

ಇಂದು ಹಣಕಾಸು ವರ್ಷದ ಅಂತ್ಯ: ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆದಾರರೇ ಎಚ್ಚರ; ಇಂದೇ ಈ ಕೆಲಸ ಮುಗಿಸದಿದ್ದರೆ ಸಂಕಷ್ಟ!

31/03/2026 10:33 AM
State News
KARNATAKA

ದೇಶದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆ, ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಅತಿವೃಷ್ಟಿ : ಗವಿಮಠದ ಪಂಚಾಂಗ ಭವಿಷ್ಯ.!

By kannadanewsnow5731/03/2026 10:50 AM KARNATAKA 1 Min Read

ಕೊಪ್ಪಳ: ಕೊಪ್ಪಳದ ಇತಿಹಾಸ ಪ್ರಸಿದ್ಧ ಗವಿಮಠದಲ್ಲಿ ಯುಗಾದಿ ಪಾಡ್ಯದ ಅಂಗವಾಗಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ…

BREAKING : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ | 1st PUC Result 2026

31/03/2026 10:30 AM

BREAKING : ಪರಪ್ಪನ ಅಗ್ರಹಾರ ಜೈಲಿಗೆ ಡ್ರಗ್ಸ್, ಸಿಮ್ ಪೂರೈಕೆ : ಯುವತಿ ಅರೆಸ್ಟ್.!

31/03/2026 10:29 AM

ಪೋಷಕರೇ ಗಮನಿಸಿ : 2026-27ನೇ ಸಾಲಿಗೆ ನಿಮ್ಮ ಮಕ್ಕಳನ್ನು 1 ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!

31/03/2026 10:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.