ಬೆಳಗಾವಿ : ಒಂದು ಕಡೆ ಮುಡಾ ಹಗರಣದಿಂದ ಹೇಗೆ ಪಾರಾಗಬೇಕು ಎಂದು ತಲೆಕೆಡಿಸಿಕೊಂಡಿರುವ ಸಿದ್ದರಾಮಯ್ಯ, ಇನ್ನೊಂದಡೆ ಉಳಿದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಿಎಂ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ಇದರ ಮಧ್ಯ ಹಲವು ಸಚಿವರು ಈಗಾಗಲೇ ನಾನು ಸಿಎಂ ಆಗುತ್ತೇನೆ ಎಂಬ ಹೇಳಿಕೆಯನ್ನು ಕೂಡ ನೀಡಿದ್ದಾರೆ.
ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಪೋಸ್ಟ್ ವೈರಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸತೀಶ್ ಜಾರಕಿಹೊಳಿ ಪರ ಅಭಿಯಾನ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಪೋಸ್ಟ್ ಕಾಡಿದಾಡುತ್ತಿದೆ ಸಿಎಂ ಸತೀಶ್ ಜಾರಕಿಹೊಳಿ ಅಂತ ಗ್ರೂಪ್ ಕ್ರಿಯೇಟ್ ಮಾಡಲಾಗಿದ್ದು ಪತ್ರಿಕೆಯಲ್ಲಿ ಜಾಹೀರಾತು ನೀಡಿ ಅಭಿಮಾನಿಗಳಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದಾರೆ. ದೆಹಲಿಗೆ ಹೋದ ಬಂದ ಬಳಿಕ ಅವರ ಜೊತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೊಳಿಯವರೇ ಮುಂದಿನ ಸಿಎಂ ಎನ್ನುವ ನಿಟ್ಟಿನಲ್ಲಿ ಪೋಸ್ಟ್ ವೈರಲ್ ಮಾಡುತ್ತಿದ್ದಾರೆ.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿದ್ದು ಅಕಸ್ಮಾತ್ ಸಿದ್ರಾಮಯ್ಯ ರಾಜೀನಾಮೆ ನೀಡಿದ್ದೆ ಆದಲ್ಲಿ ಅದಕ್ಕೆ ಸೂಕ್ತವಾದಂತ ವ್ಯಕ್ತಿ ಸತೀಶ್ ಜಾರಕಿಹೊಳಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೈನ್ ಕೂಡ ಮಾಡುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಸಿಎಂ ಅಗಲಿ ಎಂದು ಸ್ವಾಭಾವಿಕವಾಗಿ ಹೇಳುತ್ತಾರೆ ಅದನ್ನು ಸೀರಿಯಸ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಯಾರೋ ಒಬ್ಬರು ಜಾಹೀರಾತು ಹಾಕಿದರೆ ಅದನ್ನೆಲ್ಲ ಸೀರಿಯಸ್ ತೆಗೆದುಕೊಳ್ಳುಬೇಕಿಲ್ಲ. ನಮ್ಮವರು ನಮ್ಮ ಬೆಂಬಲಿಗರು ನಾನು ಸಿಎಂ ಆಗಬೇಕೆಂದು ಹಾಕುತ್ತಾರೆ ಅಷ್ಟೇ. ಸಿಎಂ ಬದಲಾವಣೆ ಪರಿಸ್ಥಿತಿನು ಇಲ್ಲ. ಆ ಥರ ಸನ್ನಿವೇಶ ಕೂಡ ಇಲ್ಲ ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಅವರೇ ಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.