ಬೆಂಗಳೂರು : ಪೂರ್ವಾನುಮತಿ ಇಲ್ಲದೇ ಅನಧಿಕೃತವಾಗಿ ರಜೆ ಹಾಕುವುದು ಉದ್ಯೋಗಿಯ ಹಕ್ಕಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಟ್ರೈನಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟರಾಮಯ್ಯ ಎಂಬುವರನ್ನು ಸೇವೆಯಿಂದ ತೆಗೆದುಹಾಕಿದ್ದ ಆದೇಶ ರದ್ದುಪಡಿಸಿದ್ದ ಕಾರ್ಮಿಕ ಕೋರ್ಟ್ ನ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಿರುವ ನ್ಯಾ.ಎಂ.ಜ್ಯೋತಿ ಅವರ ಪೀಠ, ಪೂರ್ವಾನುಮತಿ ಇಲ್ಲದೆ ನೌಕರಿಗೆ ಗೈರಾಗುವುದು ದುರ್ನತಡೆ. ಶ್ರದ್ದೆಯಿಂದ ಕೆಲಸ ಮಾಡದ ಉದ್ಯೋಗಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪೂರ್ವಾನುಮತಿ ಮತ್ತು ರಜೆ ಪಡೆಯದೆ ವೆಂಕಟರಾಮಯ್ಯ 2016ರ ಡಿ.1ರ ನಂತರ ಅನಧಿಕೃತವಾಗಿ ಉದ್ಯೋ ಗಕ್ಕೆ ಗೈರಾಗಿದ್ದಾರೆ. ಈ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯಿಂದ ವಜಾಗೊಳಿಸಿದೆ. ಉದ್ಯೋಗ ನಿರ್ವಹಣೆ ವೇಳೆ ಸಕಾರಣವಿಲ್ಲದೆ ಉದ್ಯೋಗಕ್ಕೆ ನೌಕರ ಅನಧಿ ಕೃತವಾಗಿ ಗೈರಾಗಬಾರದು. ರಜೆಯಿಲ್ಲದೆ ಗೈರಾಗುವುದು ದುರ್ನಡತೆ ಆಗಲಿದೆ ಎಂದು ಕೋರ್ಟ್ ಪೀಠ ಹೇಳಿದೆ.








