ಬೆಂಗಳೂರು : ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ವ್ಯಾಪಾರ ಸಂಬಂಧಿತ ಪರವಾನಗಿ ಸೇವೆಗಳನ್ನು ಪಡೆಯುವ ವಿಧಾನಗಳನ್ನು ಇಲ್ಲಿ ತಿಳಿಯಿರಿ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ವ್ಯಾಪಾರ ಸಂಬಂಧಿತ ಪರವಾನಗಿ ಸೇವೆಗಳು
1. ವ್ಯಾಪಾರ ಪರವಾನಗಿ
2. ಕೈಗಾರಿಕ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
3. ನಿರಾಕ್ಷೇಪಣಾ ಪತ್ರ
ಬಾಪೂಜಿ ಸೇವಾ ಕೇಂದ್ರಗಳಲ್ಲಿ ವ್ಯಾಪಾರ ಸಂಬಂಧಿತ ಪರವಾನಗಿ ಪಡೆಯುವುದು ಹೇಗೆ?
ವ್ಯಾಪಾರ ಪರವಾನಗಿ ಅರ್ಜಿ ಭರ್ತಿ ಮಾಡಿ
ಅರ್ಜಿ ಶುಲ್ಕ 50 ರೂಪಾಯಿ ಪಾವತಿಸಿ
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ
ಬಾಪೂಜಿ ಸೇವಾ ಕೇಂದ್ರಗಳಲ್ಲಿ ವ್ಯಾಪಾರ ಸಂಬಂಧಿತ ಪರವಾನಗಿ ಪಡೆಯಲು ಈ ದಾಖಲೆಗಳು ಕಡ್ಡಾಯ
ಮಾಲೀಕತ್ವ ಪ್ರಮಾಣಪತ್ರ (ಸ್ವಂತ ಕಟ್ಟಡವಾಗಿದ್ದರೆ ಕಡ್ಡಾಯ)
ವ್ಯಾಪಾರಕ್ಕೆ ಸಂಬಂಧಿಸಿದ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ
ಇ-ಸ್ವತ್ತು ಫಾರ್ಮ್ (ಕಡ್ಡಾಯ)
ಬಾಡಿಗೆ/ಗುತ್ತಿಗೆ ಒಪ್ಪಂದ ( ಬಾಡಿಗೆ/ಗುತ್ತಿಗೆ ಕಟ್ಟಡವಾಗಿದ್ದರೆ ಕಡ್ಡಾಯ)
ಆಸ್ತಿ ತೆರಿಗೆ ಪಾವತಿಸಿದ ರಸೀದಿ (ಕಡ್ಡಾಯ)