ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ನಡೆಯಲಿದೆ.
ಆಹಾರ ಇಲಾಖೆ ಸ್ಥಳೀಯ ಕಚೇರಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿ ಕಾರ್ಯ ನಡೆಯಲಿದೆ. ಆಧಾರ್, ಪಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿದವರು ಕಾರ್ಡುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ನೌಕರರೇ, ತೆರಿಗೆ ಪಾವತಿದಾರರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವರು. ಕಾರ್ಡ್ ಹೊಂದಿದವರು ಬಡವರೇ, ಶ್ರೀಮಂತರೇ ಎಂದು ಮನೆ ಪರಿಶೀಲಿಸಿ ಆರ್ಡಿ ನಂಬರ್, ಜೊತೆಗೆ ದಾಖಲೆ ಪರಿಶೀಲಿಸಲಿದ್ದಾರೆ. ಕಾರ್ಡ್ ಬದಲಾಯಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.
ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡು ರದ್ದಾದವರಿಗೆ ಪರಿಶೀಲನೆ ಬಳಿಕ ತಿದ್ದುಪಡಿ ಕಾರ್ಡ್ ನೀಡಲಾಗುವುದು. ಈಗಾಗಲೇ ಅಂತಹ ಕಾರ್ಡ್ ದಾರರು ಪಡಿತರ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.