ನವದೆಹಲಿ : ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಪಾಕಿಸ್ತಾನದೊಂದಿಗಿನ ಈ ಉದ್ವಿಗ್ನತೆಯ ನಡುವೆಯೂ, ಭಾರತೀಯ ನೌಕಾಪಡೆ ಯುದ್ಧಾಭ್ಯಾಸದಲ್ಲಿ ತೊಡಗಿದೆ. ಭಾನುವಾರ ನೌಕಾಪಡೆಯು ಮಿಸೈಲ್ ಪರೀಕ್ಷೆ ನಡೆಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ನೌಕಾಪಡೆಯು ಈ ಯುದ್ಧಭ್ಯಾಸ ನಡೆಸುತ್ತಿದೆ. ಇದಕ್ಕೂ ಮೊದಲು, ಐಎಎಸ್ ಸೂರತ್‌ನಿಂದ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಪಾಕಿಸ್ತಾನವು ಹೊಸ ಕ್ಷಿಪಣಿಯನ್ನು ಸಹ ಪರೀಕ್ಷಿಸಬಹುದು ಎಂಬ ಮಾತು ಕೂಡ ಇದೆ.
ದೀರ್ಘ-ಶ್ರೇಣಿಯ ನಿಖರ ಆಕ್ರಮಣಕಾರಿ ದಾಳಿಗೆ ವೇದಿಕೆಗಳು, ವ್ಯವಸ್ಥೆಗಳು ಮತ್ತು ಸಿಬ್ಬಂದಿಗಳ ಸನ್ನದ್ಧತೆಯನ್ನು ಮರು-ಮೌಲ್ಯಮಾಪನ ಮಾಡಲು ಮತ್ತು ಪ್ರದರ್ಶಿಸಲು ಭಾರತೀಯ ನೌಕಾಪಡೆಯ ಹಡಗುಗಳು ಬಹು ಹಡಗು ವಿರೋಧಿ ಗುಂಡಿನ ದಾಳಿಗಳನ್ನು ಯಶಸ್ವಿಯಾಗಿ ನಡೆಸಿದವು” ಎಂದು ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.