ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಹೌದು, ಬೆಂಗಳೂರಿನ ರಸ್ತೆಗಳಲ್ಲಿ ಅತಿರೇಕದ ಜಗಳಗಳಿಗಿಲ್ಲ ಅವಕಾಶ! ನಿಮ್ಮ ಆಕ್ರೋಶ ಬದಿಗೊತ್ತಿ, ತಾಳ್ಮೆಯನ್ನು ತಂದುಕೊಳ್ಳಿ. ರಸ್ತೆ ಜಗಳ ಅಪಾಯಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಅಪರಾಧ ಕೂಡ. ಅದರಲ್ಲಿ ಭಾಗಿಯಾದರೆ ಕಾನೂನು ಕ್ರಮ ನಿಶ್ಚಿತ! ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ 112ಗೆ ಕರೆ ಮಾಡಿ ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಇತ್ತೀಚಿಗೆ ರಸ್ತೆಗಳಲ್ಲಿ ರೋಡ್ ರೇಜ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಚಾರಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ರಸ್ತೆಗಳಲ್ಲಿ ಜಗಳ ಮಾಡಿಕೊಂಡರೆ ಕಾನೂನು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Reckless rage has no place on Bengaluru’s roads! Let’s swap anger for patience. Road rage isn’t just dangerous—it’s a crime. Legal action awaits! Dial #Namma112 for help.#WeServeWeProtect
ಬೆಂಗಳೂರಿನ ರಸ್ತೆಗಳಲ್ಲಿ ಅತಿರೇಕದ ಜಗಳಗಳಿಗಿಲ್ಲ ಅವಕಾಶ! ನಿಮ್ಮ ಆಕ್ರೋಶ ಬದಿಗೊತ್ತಿ, ತಾಳ್ಮೆಯನ್ನು… pic.twitter.com/EnGpb67bue
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) August 29, 2024








